ಮುಂಬೈ: ಮುಂಬೈ ಇಂಡಿಯನ್ಸ್ ತಂಡ ಮಹಿಳಾ ಐಪಿಎಲ್ ಖ್ಯಾತಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ನಾಯಕಿ ಹರ್ಮಾನ್‌ಪ್ರೀತ್ ಕೌರ್ (66 ರನ್, 44 ಎಸೆತ, 9 ಬೌಂಡರಿ, 2 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ಆಲ್ರೌಂಡರ್ ನ್ಯಾಟ್ ಸೀವರ್ ಬ್ರಂಟ್ (30ಕ್ಕೆ 3) ಬಿಗಿ ದಾಳಿಯ ನೆರವಿನಿಂದ ಮುಂಬೈ ಇಂಡಿಯನ್ಸ್ 3ನೇ ಆವೃತ್ತಿಯ ೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 8 ರನ್‌ಗಳಿಂದ ಗೆದ್ದು ಬೀಗಿತು. ಮೆಗ್ ಲ್ಯಾನಿಂಗ್ ಸಾರಥ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ ಮೂರನೇ ೈನಲ್‌ನಲ್ಲೂ ನಿರಾಸೆ ಕಂಡು ರನ್ನರ್ ಅಪ್‌ಗೆ ತೃಪ್ತಿಪಟ್ಟಿತು.
ಬ್ರಬೋರ್ನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪ್ರಶಸ್ತಿ ಕಾದಾಟದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಮುಂಬೈ ಮಾರಿಜಾನ್ನೆ ಕಾಪ್ (11ಕ್ಕೆ 2) ಬಿಗಿ ದಾಳಿಯ ನಡುವೆಯೂ, ಹರ್ಮಾನ್‌ಪ್ರೀತ್ ಹಾಗೂ ನ್ಯಾಟ್ ಸೀವರ್ ಬ್ರಂಟ್ ಜತೆಯಾಟದ ನೆರವಿನಿಂದ 7 ವಿಕೆಟ್‌ಗೆ 149 ರನ್ ಕಲೆಹಾಕಿತು. ಪ್ರತಿಯಾಗಿ ಚೇಸಿಂಗ್‌ನಲ್ಲಿ 83 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡ ಡೆಲ್ಲಿ ತಂಡ ಒತ್ತಡಕ್ಕೆ ಸಿಲುಕಿತು. ಮಾರಿಜಾನ್ನೆ ಕಾಪ್ (40 ರನ್, 26 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಕನ್ನಡತಿ ನಿಕಿ ಪ್ರಸಾದ್ (25* ರನ್, 23 ಎಸೆತ, 1 ಬೌಂಡರಿ, 1 ಸಿಕ್ಸರ್) ಹೋರಾಟದ ನಡುವೆಯೂ ಡೆಲ್ಲಿ ಅಂತಿಮವಾಗಿ 9 ವಿಕೆಟ್‌ಗೆ 141 ರನ್‌ಗಳಿಸಲಷ್ಟೇ ಶಕ್ತವಾಯಿತು.
ಮುಂಬೈ ಇಂಡಿಯನ್ಸ್: 7 ವಿಕೆಟ್‌ಗೆ 149 (ಯಸ್ತಿಕಾ 8, ಮ್ಯಾಥ್ಯೂಸ್ 3, ಸೀವರ್ 30, ಹರ್ಮಾನ್‌ಪ್ರೀತ್ 66, ಕೆರ್ 2, ಸಜನಾ 0, ಕಮಲಿನಿ 10, ಅಮನ್‌ಜೋತ್ 14*, ಸಂಸ್ಕೃತಿ 8*, ಮಾರಿಜಾನ್ನೆ 11ಕ್ಕೆ 2, ಜೊನಾಸೆನ್ 26ಕ್ಕೆ 2, ಶ್ರೀಚರಣಿ 43ಕ್ಕೆ 2).
ಡೆಲ್ಲಿ ಕ್ಯಾಪಿಟಲ್ಸ್: 9 ವಿಕೆಟ್‌ಗೆ 141 (ಲ್ಯಾನಿಂಗ್ 13, ಶೆಾಲಿ 4, ಜೊನಾಸೆನ್ 13, ಜೆಮೀಮಾ 30, ಅನ್ನಾಬೆಲ್ 2, ಮಾರಿಜಾನೆ 40, ಸಾರಾ ಬ್ರೈಸ್ 5, ನಿಕಿ ಪ್ರಸಾದ್ 25*, ಶಿಖಾ ಪಾಂಡೆ 0, ಮಿನ್ನು 4, ಸೀವರ್ ಬ್ರಂಟ್ 30ಕ್ಕೆ 3, ಕೆರ್ 35ಕ್ಕೆ 2).
ಮಾರಿಜಾನೆ-ನಿಕಿ ಹೋರಾಟ ವ್ಯರ್ಥ
ಚೇಸಿಂಗ್‌ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್‌ಗೂ ಉತ್ತಮ ದೊರೆಯಲಿಲ್ಲ. ನಾಯಕಿ ಮೆಗ್ ಲ್ಯಾನಿಂಗ್ (13) ಹಾಗೂ ಶೆಾಲಿ ವರ್ಮ (4) ನಿರಾಸೆ ಮೂಡಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 12 ಎಸೆತಗಳಲ್ಲಿ 15 ರನ್‌ಗಳಿಸಿದರು. ನಂತರ ಜೆಸ್ ಜೊನಾಸೆನ್ (13) ಹಾಗೂ ಜೆಮೀಮಾ ರೋಡ್ರಿಗಸ್ (30)ಮೂರನೇ ವಿಕೆಟ್‌ಗೆ 20 ಎಸೆತಗಳಲ್ಲಿ 20 ರನ್‌ಗಳಿಸಿದರು. ಬಳಿಕ ದಿಢೀರ್ ಕುಸಿತ ಕಂಡ ಡೆಲ್ಲಿ 83 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅನ್ನಾಬೆಲ್ ಸುದರ್‌ಲ್ಯಾಂಡ್ (2), ಸಾರಾ ಬ್ರೈಸ್ (5) ಕೈ ಕೊಟ್ಟರು. ನಂತರ 7ನೇ ವಿಕೆಟ್‌ಗೆ ಜತೆಯಾದ ಮಾರಿಜಾನ್ನೆ ಹಾಗೂ ನಿಕಿ ಪ್ರಸಾದ್ 29 ಎಸೆತಗಳಲ್ಲಿ 40 ರನ್ ಕಸಿದು ಚೇಸಿಂಗ್‌ಗೆ ಬಲ ತುಂಬಿದರು. 17ನೇ ಓವರ್‌ನಲ್ಲಿ ಮಾರಿಜಾನ್ನೆ ವಿಕೆಟ್ ಪಡೆದ ಸೀವರ್ ಬ್ರಂಟ್ ಪಂದ್ಯಕ್ಕೆ ತಿರುವು ನೀಡಿದರು. ಸೀವರ್ ಬ್ರಂಟ್ ಎಸೆದ ಅಂತಿಮ ಓವರ್‌ನಲ್ಲಿ 14 ರನ್ ಬೇಕಿದ್ದಾಗ (1,1,0,1,1,1) ಡೆಲ್ಲಿ 5 ರನ್ ಮಾತ್ರಗಳಿಸಿತು.