Mahira Sharma: ಟೀಮ್ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಅವರು ಚಿತ್ರೋದ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುತ್ತಿರುವ ವದಂತಿ ಮತ್ತೊಮ್ಮೆ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತು. ಪ್ರಸಿದ್ಧ ಗಾಯಕಿ ಆಶಾ ಭೋಂಸ್ಲೆ ಅವರ ಮೊಮ್ಮಗಳು ಜನೈ ಭೋಂಸ್ಲೆ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಈ ಹಿಂದೆ ವ್ಯಾಪಕವಾಗಿ ಹರಿದಾಡಿದ್ದವು. ಆದರೆ, ಸಿರಾಜ್ ಆ ವದಂತಿಗಳನ್ನು ತಳ್ಳಿಹಾಕಿದ್ದರು. ಈಗ ಮತ್ತೊಂದು ವದಂತಿ ಹಡಿದಾಡುತ್ತಿದ್ದು, ಹಿಂದಿ ಬಿಗ್ಬಾಸ್ ಖ್ಯಾತಿಯ ಮಹಿರಾ ಶರ್ಮಾ ಅವರೊಂದಿಗೆ ಸಿರಾಜ್ ಕದ್ದುಮುಚ್ಚಿ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಮಹಿರಾ ಕಡೆಗೂ ವದಂತಿಗಳ ಕುರಿತಾಗಿ ಮೌನ ಮುರಿದಿದ್ದಾರೆ.
ಇದನ್ನೂ ಓದಿ: ಎಂದಿಗೂ ಆ ರೀತಿ ನಡೆದುಕೊಂಡಿಲ್ಲ! KKR ಮಾಲೀಕ ನಟ ಶಾರುಖ್ ಖಾನ್ ಬಗ್ಗೆ ವೆಂಕಟೇಶ್ ಅಯ್ಯರ್ ಓಪನ್ ಟಾಕ್ | IPL 2025
ಮೊಹಮ್ಮದ್ ಸಿರಾಜ್ ಜತೆಗಿನ ಡೇಟಿಂಗ್ ವದಂತಿಗಳಿಗೆ ತೆರೆ ಎಳೆದ ಮಹಿರಾ ಶರ್ಮಾ, "ನಾನು ಯಾರೊಂದಿಗೂ ಪ್ರೀತಿ-ಪ್ರೇಮ ಸಂಬಂಧದಲ್ಲಿ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ. ನಾನು ಸಿರಾಜ್ರನ್ನು ಡೇಟಿಂಗ್ ಮಾಡುತ್ತಿಲ್ಲ. ನನ್ನ ವಿರುದ್ಧ ಇಂತಹ ಸುಳ್ಳು ಸುದ್ದಿ, ಊಹಾಪೋಹಗಳನ್ನು ಈ ಕೂಡಲೇ ಜಾಲತಾಣಗಳಲ್ಲಿ ಹಬ್ಬಿಸುವುದನ್ನು ನಿಲ್ಲಿಸಿ" ಎಂದು ನೆಟ್ಟಿಗರಲ್ಲಿ ಮನವಿ ಮಾಡಿದ್ದಾರೆ. ಇನ್ನು ಸಿರಾಜ್ ಕೂಡ ಇದೇ ವಿಷಯಕ್ಕೆ ಪ್ರತಿಕ್ರಿಯಿಸಿದ್ದು, ಮಹಿರಾ ಜತೆ ನಾನು ಡೇಟಿಂಗ್ ಮಾಡುತ್ತಿಲ್ಲ ಎಂದಿದ್ದಾರೆ.
ಮಹಿರಾ ಜತೆಗಿನ ಪ್ರೀತಿ, ಡೇಟಿಂಗ್ ಸುದ್ದಿಗಳು ಶುದ್ಧ ಸುಳ್ಳು ಎಂದು ಸಿರಾಟ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದರು. ಆದಾಗ್ಯೂ, ಈ ಪೋಸ್ಟ್ ಹಾಕಿದ ಕೆಲವೇ ಸಮಯದಲ್ಲಿ ಸಿರಾಜ್ ತಮ್ಮ ಅಧಿಕೃತ ಜಾಲತಾಣದ ಖಾತೆಯಿಂದ ಡಿಲೀಟ್ ಮಾಡಿರುವುದು ತೀವ್ರ ಕುತೂಹಲಕಾರಿಯಾಗಿದೆ. ಇಲ್ಲಿ ಸಿರಾಜ್ ಏನನ್ನೋ ಮರೆಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ,(ಏಜೆನ್ಸೀಸ್).