ಬೆಂಗಳೂರು: ಬ್ಯಾಟರ್ ಮೊಹಮದ್ ತಾಹ (66 ರನ್, 35 ಎಸೆತ, 5 ಬೌಂಡರಿ, 5 ಸಿಕ್ಸರ್) ಬಿರುಸಿನ ಬ್ಯಾಟಿಂಗ್ ಹಾಗೂ ಕೆಸಿ ಕಾರಿಯಪ್ಪ (31ಕ್ಕೆ3) ಬಿಗಿ ಬೌಲಿಂಗ್ ದಾಳಿಯ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ಎದುರು 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಇದೊಂದಿಗೆ ಮನೀಷ್ ಪಾಂಡೆ ಬಳಗ ಗೆಲುವಿನ ಹಳಿಗೆ ಮರಳಿದೆ. ಮಯಾಂಕ್ ಅಗರ್ವಾಲ್ ಬಳಗ ಸತತ 7ನೇ ಸೋಲಿನೊಂದಿಗೆ ಸೆಮಿೈನಲ್ ರೇಸ್‌ನಿಂದ ಹೊರಬಿದ್ದಿದೆ.
ಚಿನ್ನಸ್ವಾಮಿ ಅಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ನಾಯಕ ಮಯಾಂಕ್ ಅಗರ್ವಾಲ್ (68 ರನ್, 38 ಎಸೆತ, 3 ಬೌಂಡರಿ,6 ಸಿಕ್ಸರ್) ಹಾಗೂ ಡಿ. ನಿಶ್ಚಲ್ (54 ರನ್, 42 ಎಸೆತ, 5 ಬೌಂಡರಿ) ಅರ್ಧಶತಕಗಳ ಬಲದಿಂದ 5 ವಿಕೆಟ್‌ಗೆ 188 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಪ್ರತಿಯಾಗಿ ಮೊಹಮದ್ ತಾಹ ಹಾಗೂ ಕೆಎಲ್ ಶ್ರೀಜಿತ್ (45*) ಜತೆಯಾಟದ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡ 18.3 ಓವರ್‌ಗಳಲ್ಲಿ 4 ವಿಕೆಟ್‌ಗೆ 190 ರನ್ ಪೇರಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿತು.
ಬೆಂಗಳೂರು ಬ್ಲಾಸ್ಟರ್ಸ್: 5 ವಿಕೆಟ್‌ಗೆ 188 ( ಮಯಾಂಕ್ 68, ಡಿ. ನಿಶ್ಚಲ್ 54, ಶುಭಾಂಗ್ 29, ಲೋಚನ್ ಅಪ್ಪಣ್ಣ 11, ಕೆಸಿ ಕಾರಿಯಪ್ಪ 31ಕ್ಕೆ 3, ವಿದ್ವತ್ ಕಾವೇರಪ್ಪ 29ಕ್ಕೆ2).
ಹುಬ್ಬಳ್ಳಿ ಟೈಗರ್ಸ್: 18.3 ಓವರ್‌ಗಳಲ್ಲಿ 4 ವಿಕೆಟ್‌ಗೆ 190 (ಲವನೀತ್ ಸಿಸೋಡಿಯಾ 20, ತಾಹ 66, ಕೆಎಲ್ ಶ್ರೀಜಿತ್ 45, ಮನೀಷ್ ಪಾಂಡೆ 35*, ರ್ಸ್ರಾಜ್ 34ಕ್ಕೆ2).