ಕ್ರೀಡೆ

ಗೆಲುವಿನ ಬ್ಲಾಸ್ಟ್ ಕಾಣದ ಬೆಂಗಳೂರು: ಮಯಾಂಕ್ ಪಡೆಗೆ ಸತತ ಆರನೇ ಸೋಲು

ಬೆಂಗಳೂರು: ಇಂಪ್ಯಾಕ್ಟ್ ಪ್ಲೇಯರ್ ಪರಾಸ್ ಗುರ್ಬಾಕ್ಸ್ ಆರ್ಯ (22ಕ್ಕೆ5) ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಮಂಗಳೂರು ಡ್ಯಾ ್ರಗನ್ಸ್ ತಂಡ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯಲ್ಲಿ ಹಾಲಿ ರನ್ನರ್ ಅಪ್ ಬೆಂಗಳೂರು ಬ್ಲಾಸ್ಟರ್ಸ್‌ ಎದುರು 31 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಮಯಾಂಕ್ ಅಗರ್ವಾಲ್ ಬಳಗ ಸತತ ಆರನೇ ಸೋಲು ಅನುಭವಿಸಿತು.


ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ಮಯಾಂಕ್ ಫೀಲ್ಡಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ನಡೆಸಿದ ಮಂಗಳೂರು ಡ್ಯಾ ್ರಗನ್ಸ್ ತಂಡ ಅನಿರುದ್ದ ಜೋಷಿ (390 ಹಾಗೂ ಅನೀಶ್ವರ್ ಗೌತಮ್ (32) ಜತೆಯಾಟದ ನೆರವಿನಿಂದ 7 ವಿಕೆಟ್‌ಗೆ 171 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಸವಾಲಿನ ಮೊತ್ತ ಚೇಸಿಂಗ್ ನಡೆಸಿದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಶುಭಾಂಗ್ ಹೆಗ್ಡೆ (54* ರನ್, 41 ಎಸೆತ,1 ಬೌಂಡರಿ, 4 ಸಿಕ್ಸರ್) ಏಕಾಂಗಿ ಹೋರಾಟದಿಂದ 9 ವಿಕೆಟ್‌ಗೆ 140 ರನ್‌ಗಳಿಸಲಷ್ಟೇ ಶಕ್ತವಾಯಿತು.

ಮಂಗಳೂರು ಡ್ಯಾಗನ್ಸ್ :7 ವಿಕೆಟ್‌ಗೆ 171 (ಕೆ. ಸಿದ್ದಾರ್ಥ್ 23, ರೋಹನ್ ಪಾಟೀಲ್ 28, ಬಿಆರ್ ಶರತ್ 21, ಅನಿರುದ್ಧ 39, ಅನೀಶ್ವರ್ 32, ಕೆ, ಗೌತಮ್ 0, ಪ್ರದೀಪ್ 34ಕ್ಕೆ2, ಎಲ್‌ಆರ್ ಕುಮಾರ್ 27ಕ್ಕೆ2, ರ್ಸ್ರಾಜ್ 21ಕ್ಕೆ2)
ಬೆಂಗಳೂರು ಬ್ಲಾಸ್ಟರ್ಸ್‌: 9 ವಿಕೆಟ್‌ಗೆ 140 (ಮಯಾಂಕ್ 23, ಡಿ. ನಿಶ್ಚಲ್ 0, ಪವನ್ ದೇಶಪಾಂಡೆ 4, ಸೂರಜ್ 5, ಶುಭಾಂಗ್ 54*,ರ್ಸ್ರಾಜ್ 23, ಪರಾಸ್ 22ಕ್ಕೆ5, ಆನಂದ್ ದೊಡ್ಡಮನಿ 20ಕ್ಕೆ2).