ಬೆಂಗಳೂರು: ಲೀಗ್ ಹಂತದ ಅಂಕಪಟ್ಟಿಯಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿೈನಲ್‌ಗೆ ಅರ್ಹತೆ ಪಡೆಯಲಿದ್ದು, ಹುಬ್ಬಳ್ಳಿ ಟೈಗರ್ಸ್ (16), ಮೈಸೂರು ವಾರಿಯರ್ಸ್ (12) ಉಪಾಂತ್ಯ ಪ್ರವೇಶ ಖಚಿತಪಡಿಸಿಕೊಂಡಿವೆ. 3ನೇ ಸ್ಥಾನದಲ್ಲಿರುವ ಗುಲ್ಬರ್ಗಾ ಮಿಸ್ಟಿಕ್ಸ್‌ಗೂ (10) ಉತ್ತಮ ರನ್‌ರೇಟ್‌ನಿಂದಾಗಿ ಸೆಮೀಸ್ ಸ್ಥಾನ ಬಹುತೇಕ ಖಚಿತವೆನಿಸಿದ್ದರೆ, 4 ಹಾಗೂ ಅಂತಿಮ ಸ್ಥಾನಕ್ಕೆ ಶಿವಮೊಗ್ಗ ಲಯನ್ಸ್ (8) ಹಾಗೂ ಮಂಗಳೂರು ಡ್ರ್ಯಾಗನ್ಸ್ (8) ನಡುವೆ ನೇರ ಪೈಪೋಟಿ ಏರ್ಪಟ್ಟಿದೆ. ಭಾನುವಾರ ಎರಡೂ ತಂಡಗಳು ಅಂತಿಮ ಲೀಗ್ ಪಂದ್ಯ ಆಡಲಿದ್ದು, ಗೆಲುವು ದಾಖಲಿಸಿದ ತಂಡ ಉಪಾಂತ್ಯಕ್ಕೇರಲಿದೆ. ಎರಡೂ ತಂಡ ಗೆದ್ದರೆ ಅಥವಾ ಎರಡೂ ಸೋತರೆ ರನ್‌ರೇಟ್ ಲೆಕ್ಕಾಚಾರದಲ್ಲಿ ಪ್ರವೇಶ ಸಿಗಲಿದೆ.
ನಾಳೆಯ ಪಂದ್ಯಗಳು
ಮಂಗಳೂರು ಡ್ರ್ಯಾಗನ್ಸ್- ಗುಲ್ಬರ್ಗಾ ಮಿಸ್ಟಿಕ್ಸ್
ಆರಂಭ: ಮಧ್ಯಾಹ್ನ 1
ಶಿವಮೊಗ್ಗ ಲಯನ್ಸ್-ಬೆಂಗಳೂರು ಬ್ಯಾಸ್ಟರ್ಸ್
ಆರಂಭ: ಸಂಜೆ 5.30