ನ್ಯೂಯಾರ್ಕ್: ವಸಸಂಹಿತೆ ಉಲ್ಲಂಸಿ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್‌ಷಿಪ್‌ನಿಂದ ಅನರ್ಹಗೊಂಡಿದ್ದ ಐದು ಬಾರಿಯ ವಿಶ್ವ ಚಾಂಪಿಯನ್, ವಿಶ್ವ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲ್‌ಸೆನ್, ವಿಶ್ವ ಬ್ಲಿಟ್ಜ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಮರಳಿ ಸ್ಪರ್ಧೆಗಿಳಿಯಲಿದ್ದಾರೆ. ಟೂರ್ನಿಯ ನಿಯಮದಲ್ಲಿ ಸಣ್ಣ ಬದಲಾವಣೆಯೊಂದಿಗೆ ಸ್ಪರ್ಧಿಗಳಿಗೆ ಜೀನ್ಸ್ ಪ್ಯಾಂಟ್ ಧರಿಸಲು ಅವಕಾಶ ನೀಡಿರುವುದಾಗಿ ವಿಶ್ವ ಚೆಸ್ ಆಡಳಿತ ಸಂಸ್ಥೆ ಫಿಡೆ ತಿಳಿಸಿದೆ.
ವಸಸಂಹಿತೆಯ ವಿನಾಯಿತಿ ಬಗ್ಗೆ ಫಿಡೆ ಮುಖ್ಯಸ್ಥ ಅರ್ಕಾಡಿ ಡ್ವೊರ್ಕೊವಿಚ್ ಸೋಮವಾರ ಸ್ಪಷ್ಟನೆ ನೀಡಿದ್ದು, ಟೂರ್ನಿಯ ಅಧಿಕೃತ ಡ್ರೆಸ್‌ಕೋಡ್ ಅನ್ನು ಅನುಸರಿಸುವುದು ಕಡ್ಡಾಯ. ಆದರೆ ಔಪಚಾರಿಕವಾಗಿ ಕೆಲ ವಿನಾಯಿತಿ ನೀಡಲಾಗಿದೆ. ಇದರನ್ವಯ ಸ್ಪರ್ಧಿಗಳು ಧರಿಸುವ ಜಾಕೆಟ್‌ಗೆ ಹೊಂದಿಕೆಯಾಗುವ ಜೀನ್ಸ್ ಧರಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಅನರ್ಹಗೊಂಡ ಬಳಿಕ ಭಾನುವಾರ ಟೂರ್ನಿಯ ಮಧ್ಯದಲ್ಲಿಯೇ ಫಿಡೆ ಉಪಾಧ್ಯಕ್ಷ ಮತ್ತು ದಿಗ್ಗಜ ವಿಶ್ವನಾಥನ್ ಆನಂದ್ ಅವರನ್ನು ಭೇಟಿ ಮಾಡಿದ ನಾರ್ವೆಯ ಕಾರ್ಲ್‌ಸೆನ್, ಮುಖ್ಯಸ್ಥ ಅರ್ಕಾಡಿ ಡ್ವೊರ್ಕೊವಿಚ್ ಹಾಗೂ ಟೂರ್ನಿಯ ಪ್ರಾಯೋಜಕರ ಜತೆಗೆ ಚರ್ಚೆ ನಡೆಸಿದ ಬಳಿಕ ಈ ವಿನಾಯಿತಿ ೋಷಿಸಲಾಗಿದೆ. ಬ್ಲಿಟ್ಜ್ ಚಾಂಪಿಯನ್‌ಷಿಪ್‌ನಲ್ಲಿ ಕಾರ್ಲ್‌ಸೆನ್ ಹಾಲಿ ಚಾಂಪಿಯನ್ ಎನಿಸಿದ್ದು, ಟೂರ್ನಿಯ ರ‌್ಯಾಪಿಡ್ ವಿಭಾಗದ ಸ್ಪರ್ಧೆ ವೇಳೆ ಜೀನ್ಸ್ ಧರಿಸಿದ್ದಕ್ಕಾಗಿ ಮೊದಲ ಬಾರಿಗೆ ₹17 ಸಾವಿರ ದಂಡ ವಿಧಿಸಲಾಗಿತ್ತು. ಬಳಿಕ ಮತ್ತೆ ಜೀನ್ಸ್ ಧರಿಸಿ ಆಗಮಿಸಿದ ಕಾರ್ಲ್‌ಸೆನ್‌ಗೆ ಉಡುಪು ಬದಲಾಯಿಸಿ ಬರುವಂತೆ ತಿಳಿಸಿದರೂ, ನಿರಾಕರಿಸಿದ್ದಕ್ಕೆ ಅನರ್ಹಗೊಳಿಸಲಾಗಿತ್ತು.
‘ಕಾರ್ಲ್‌ಸೆನ್ ಅವರನ್ನು ಅನರ್ಹಗೊಳಿಸಲು ಆಡಳಿತ ಮಂಡಳಿಯು ಬಯಸುವುದಿಲ್ಲ. ಆದರೆ ಅವರು ನಿಯಮಗಳನ್ನು ಅನುಸರಿಸಲು ನಿರಾಕರಿಸಿದ ನಂತರ ನಮಗೆ ಯಾವುದೇ ಆಯ್ಕೆಗಳಿರಲಿಲ್ಲ’ ಎಂದು ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ತಿಳಿಸಿದ್ದಾರೆ.