ನವದೆಹಲಿ: ಟೀಮ್ ಇಂಡಿಯಾ ಮಾಜಿ ಆಟಗಾರ, ಸಂಸದ ಗೌತಮ್ ಗಂಭೀರ್ ಮುಂದಿನ ವರ್ಷದ ಐಪಿಎಲ್ ಆವೃತ್ತಿಗೆ ಲಖನೌ ಸೂಪರ್‌ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ಮೆಂಟರ್ ಹುದ್ದೆ ತೊರೆದು ಕೋಲ್ಕತ ನೈಟ್‌ರೈಡರ್ಸ್ ತಂಡದ ಮುಖ್ಯ ಕೋಚ್ ಆಗುವ ಸಾಧ್ಯತೆಗಳಿವೆ ಎನ್ನಲಾಗಿತ್ತು. ಆದರೆ ತಾಜಾ ಮಾಹಿತಿಯ ಪ್ರಕಾರ, 2024ರ ಐಪಿಎಲ್‌ನಿಂದಲೇ ಗಂಭೀರ್ ದೂರವುಳಿಯಲಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಆಂಡಿ ಪ್ಲೆಂಚರ್ ಬದಲಿಗೆ ಆಸ್ಟ್ರೇಲಿಯಾ ಜಸ್ಟಿನ್ ಲ್ಯಾಂಗರ್ ಅವರನ್ನು ಮುಖ್ಯ ಕೋಚ್ ಆಗಿ ಲಖನೌ ಪ್ರಾಂಚೈಸಿ ನೇಮಕ ಮಾಡಿತ್ತು. ಆಂಡಿ ್ಲವರ್ ಲಖನೌ ತಂಡದಿಂದ ಹೊರಗುಳಿದ ಬಳಿಕ ಗೌತಮ್ ಗಂಭೀರ್ ಸಹ ತಂಡ ತೊರೆಯಲಿದ್ದು, ಕೆಕೆಆರ್ ಮುಖ್ಯ ಕೋಚ್ ಆಗಿ ಸೇರ್ಪಡೆಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿತ್ತು. ಆದರೆ ಮುಂದಿನ ಆವೃತ್ತಿಗೆ ಲಖನೌ ಸೂಪರ್‌ಜೈಂಟ್ಸ್ (ಎಲ್‌ಎಸ್‌ಜಿ) ತಂಡದ ಮೆಂಟರ್ ಹುದ್ದೆ ತೊರೆಯುವುದು ಖಚಿತ ಎನಿಸಿದ್ದು, ಮುಂಬರುವ 2024ರ ಲೋಕಸಭೆ ಚುನಾವಣೆಯತ್ತ ಹೆಚ್ಚಿನ ಗಮನಹರಿಸಲಿದ್ದಾರೆ ಎನ್ನಲಾಗಿದೆ.
ಎಡಗೈ ಬ್ಯಾಟರ್ ಗೌತಮ್ ಗಂಭೀರ್ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದು, ಮರು ಆಯ್ಕೆಯ ಸಲುವಾಗಿ ಮುಂದಿನ ವರ್ಷ ಏಪ್ರಿಲ್ ಮತ್ತು ಮೇನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗುವ ಮೂಲಕ ಕ್ರಿಕೆಟ್‌ನಿಂದ ಕೆಲ ಸಮಯ ದೂರವುಳಿಯಲಿದ್ದಾರೆ ಎನ್ನಲಾಗಿದೆ.
ದೆಹಲಿ ರಾಜ್ಯದ ಬಿಜೆಪಿ ಪ್ರಮುಖ ನಾಯಕರಲ್ಲಿ ಗಂಭೀರ್ ಸಹ ಒಬ್ಬರೆನಿಸಿದ್ದು, ತವರು ಕ್ಷೇತ್ರ ಪೂರ್ವ ದೆಹಲಿ ಜಿಲ್ಲೆಯಲ್ಲಿ ನಡೆದ ಎಂಸಿಡಿ ಚುನಾವಣೆಯಲ್ಲಿ 36 ವಾರ್ಡ್‌ಗಳಲ್ಲಿ 21 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಗಂಭೀರ್ ಬಿಜೆಪಿಯ ಸ್ಟಾರ್ ಪ್ರಚಾರಕರಾಗುವ ಸಾಧ್ಯತೆಗಳಿವೆ.