ಕ್ರೀಡೆ

ಆಸೀಸ್ ಎದುರು ಸಮಬಲ ಸಾಧಿಸಿದ ಆಂಗ್ಲರು: ಲಿವಿಂಗ್‌ಸ್ಟೋನ್ ಆಲ್ರೌಂಡ್ ಆಟ

ಕಾರ್ಡಿಫ್: ಲಿಯಾಮ್ ಲಿವಿಂಗ್‌ಸ್ಟೋನ್ (87 ರನ್, 47 ಎಸೆತ, 6 ಬೌಂಡರಿ, 5 ಸಿಕ್ಸರ್ ಹಾಗೂ 16ಕ್ಕೆ 2 ವಿಕೆಟ್) ಆಲ್ರೌಂಡ್ ಆಟದ ನೆರವಿನಿಂದ ಇಂಗ್ಲೆಂಡ್ ತಂಡ ಎರಡನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು 3 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿ 1-1ರಿಂದ ಸಮಬಲಗೊಂಡಿದ್ದು, ಮೂರನೇ ಹಾಗೂ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ.

ಓಲ್ಡ್ ಟ್ರಾರ್ಡ್‌ನಲ್ಲಿ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ, ಜೇಕ್ ್ರೇಸರ್ ಮೆಕ್‌ಗುರ್ಕ್ (50 ರನ್, 31 ಎಸೆತ, 4 ಬೌಂಡರಿ, 2 ಸಿಕ್ಸರ್) ಅರ್ಧಶತಕದ ಬಲದಿಂದ 6 ವಿಕೆಟ್‌ಗೆ 193 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಪ್ರತಿಯಾಗಿ ಮ್ಯಾಥ್ಯೂ ಶಾರ್ಟ್ (22ಕ್ಕೆ 5) ಮಾರಕ ದಾಳಿಯ ನಡುವೆಯೂ ಲಿಯಾಮ್ ಲಿವಿಂಗ್ ಸ್ಟೋನ್ ಹಾಗೂ ಜೇಕಬ್ ಬೆಥೆಲ್ (44) ನಡೆಸಿದ ಜತೆಯಾಟದ ನೆರವಿಂದ ಇಂಗ್ಲೆಂಡ್ ತಂಡ 19 ಓವರ್‌ಗಳಲ್ಲಿ 7 ವಿಕೆಟ್‌ಗೆ 194 ರನ್‌ಗಳಿಸಿ ಗೆಲುವಿನ ಕೇಕೆ ಹಾಕಿತು.

ಆಸ್ಟ್ರೇಲಿಯಾ: 6 ವಿಕೆಟ್‌ಗೆ 193 (ಶಾರ್ಟ್ 28, ಟ್ರಾವಿಸ್ ಹೆಡ್ 31, ಜೇಕ್ ್ರೇಸರ್ 50, ಇಂಗ್ಲಿಸ್ 42, ಗ್ರೀನ್ 13*, ಹಾರ್ಡಿ 20*, ಲಿವಿಂಗ್ ಸ್ಟೋನ್ 16ಕ್ಕೆ 2, ಬ್ರೈಡನ್ 26ಕ್ಕೆ 2).

ಇಂಗ್ಲೆಂಡ್: 19 ಓವರ್‌ಗಳಲ್ಲಿ 7 ವಿಕೆಟ್‌ಗೆ 194 (ಸಾಲ್ಟ್ 39, ವಿಲ್ ಜಾಕ್ಸ್ 12, ಲಿವಿಂಗ್‌ಸ್ಟೋನ್ 87, ಬೆಥೆಲ್ 44, ಮ್ಯಾಥ್ಯೂ ಶಾರ್ಟ್ 22ಕ್ಕೆ 5, ಸೀನ್ ಅಬಾಟ್ 37ಕ್ಕೆ 2). ಪಂದ್ಯಶ್ರೇಷ್ಠ: ಲಿಯಾಮ್ ಲಿವಿಂಗ್‌ಸ್ಟೋನ್.