ಕ್ರೀಡೆ

ನವೆಂಬರ್‌ನಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್: ಟೂರ್ನಿಗೆ ಭಾರತ ಆತಿಥ್ಯ

ನವದೆಹಲಿ: ಎರಡನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ) ಟೂರ್ನಿಗೆ ಭಾರತ ಆತಿಥ್ಯವಹಿಸಲಿದ್ದು, ನವೆಂಬರ್ 18 ರಿಂದ ಡಿಸೆಂಬರ್ 9ರವರೆಗೆ ಟೂರ್ನಿ ನಡೆಯಲಿದೆ ಎಂದು ಸಂಘಟಕರು ಗುರುವಾರ ಖಚಿತಪಡಿಸಿದ್ದಾರೆ. ಕಳೆದ ಬಾರಿ ಅಕ್ಟೋಬರ್‌ನಲ್ಲಿ ನಡೆಸಲಾಗಿದ್ದ ಉದ್ಘಾಟನಾ ಆವೃತ್ತಿಯಲ್ಲಿ ಇಂಡಿಯಾ ಕ್ಯಾಪಿಟಲ್ಸ್ ಚಾಂಪಿಯನ್ ಆಗಿತ್ತು. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯವಹಿಸದ ನೂತನ ತಾಣಗಳಲ್ಲಿ ಟೂರ್ನಿ ಆಯೋಜಿಸುವುದರ ಜತೆಗೆ ಕ್ರಿಕೆಟ್ ಬೆಳವಣಿಗೆ ಪ್ರೋತ್ಸಾಹ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ್ರಾಂಚೈಸಿ ಹಾಗೂ ಭಾಗವಹಿಸುವ ಆಟಗಾರರ ಡ್ರ್‌ಟಾ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಗಳಿವೆ. ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ, ಆರೋನ್ ಫಿಂಚ್, ರಾಸ್ ಟೇಲರ್, ಕ್ರಿಸ್ ಗೇಲ್ ಈ ಬಾರಿಯೂ ಕಣಕ್ಕಿಳಿಯುವ ನಿರೀಕ್ಷೆ ಇದೆ. ವಿಶ್ವ ದರ್ಜೆಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಯಾವಾಗಲೂ ಸ್ವಾಗತವಿದೆ. ಮಾಜಿ ಆಟಗಾರರು ಭಾಗವಹಿಸುವುದರಿಂದ ಟೂರ್ನಿಯು ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಲಿದೆ ಎಂದು ಎಲ್‌ಎಲ್‌ಸಿ ಕಮಿಷನರ್ ರವಿಶಾಸ್ತ್ರಿ ಹೇಳಿದ್ದಾರೆ.