ಕ್ರೀಡೆ

ಭಾರತದ ಕಿರಿಯರ ತಂಡ ಶುಭಾರಂಭ: ಬಾಂಗ್ಲಾದೇಶ ಎದುರು ಭರ್ಜರಿ ಗೆಲುವು

ಬ್ಲೋಮ ಫಾಂಟೇನ್​: ಉಯೋನ್ಮುಖ ಬ್ಯಾಟರ್​ ಆದರ್ಶ್​ ಸಿಂಗ್​ (76 ರನ್​, 96 ಎಸೆತ, 6 ಬೌಂಡರಿ) ಸಮಯೋಚಿತ ಬ್ಯಾಟಿಂಗ್​ ಹಾಗೂ ಸೌಮಿ ಪಾಂಡೆ (24ಕ್ಕೆ 4) ಬಿಗಿ ಬೌಲಿಂಗ್​ ದಾಳಿಯ ನೆರವಿನಿಂದ ಭಾರತ ತಂಡ 19 ವಯೋಮಿತಿಯ ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 84 ರನ್​ಗಳಿಂದ ಗೆದ್ದು ಶುಭಾರಂಭ ಕಂಡಿದೆ.

ಮಂಗೌಂಗ್​ ಓವಲ್​ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಇಳಿದ ಭಾರತ, ಆರಂಭಿಕ ಆಘಾತದ ನಡುವೆಯೂ, ಆದರ್ಶ್​ ಸಿಂಗ್​ & ನಾಯಕ ಉದಯ್​ ಸಹರಾನ್​ (64 ರನ್​, 94 ಎಸೆತ, 4 ಬೌಂಡರಿ) ಜೋಡಿ 3ನೇ ವಿಕೆಟ್​ಗೆ ನಡೆಸಿದ 116 ರನ್​ಗಳ ಜತೆಯಾಟದ ಬಲದಿಂದ 7 ವಿಕೆಟ್​ಗೆ 251 ರನ್​ಗಳ ಸ್ಫರ್ಧಾತ್ಮಕ ಮೊತ್ತ ಕಲೆಹಾಕಿತು. ಪ್ರತಿಯಾಗಿ ಸೌಮಿ ಪಾಂಡೆ ದಾಳಿಗೆ ತತ್ತರಿಸಿದ ಬಾಂಗ್ಲಾದೇಶ, 45.5 ಓವರ್​ಗಳಲ್ಲಿ 167 ರನ್​ಗಳಿಗೆ ಸರ್ವಪತನ ಕಂಡಿತು.

ಭಾರತ: 7 ವಿಕೆಟ್​ಗೆ 251 (ಆದರ್ಶ್​ ಸಿಂಗ್​ 76, ಅರ್ಶೀನ್​ 7, ಉದಯ್​ 64, ಪ್ರಿಯಾಂಶು 23, ಅವಿನಾಶ್​ 23, ಸಚಿನ್​ 26, ಮರ್​ೂ 43ಕ್ಕೆ 5, ರಿಜ್ವಾನ್​ 23ಕ್ಕೆ 1). ಬಾಂಗ್ಲಾದೇಶ: 45.5 ಓವರ್​ಗಳಲ್ಲಿ 167 (ಅಶಿಕುರ್​ 14, ಜಿಶಾನ್​ 14,ಅರಿುಲ್​ 41, ಮೊಹಮದ್​ ಶಿಹಾಬ್​ 54, ಶೇಕ್​ ೇವೆಜ್​ 15, ಸೌಮಿ ಪಾಂಡೆ 24ಕ್ಕೆ 4,ಮುಶೀರ್​ ಖಾನ್​ 35ಕ್ಕೆ 2). ಪಂದ್ಯಶ್ರೇಷ್ಠ: ಆದರ್ಶ್​ ಸಿಂಗ್​.