ಕೋಲ್ಕತ: ತವರಿನಲ್ಲಿ 250 ಪ್ಲಸ್ ರನ್ ಕಲೆಹಾಕಿದರೂ ಸೋಲು ಅನುಭವಿಸಿದ ಕೋಲ್ಕತ ನೈಟ್ರೈಡರ್ಸ್ ತಂಡ ಐಪಿಎಲ್-17ರ ತನ್ನ 9ನೇ ಲೀಗ್ ಪಂದ್ಯದಲ್ಲಿ, ಲಯದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಮವಾರ ಸೆಣಸಾಡಲಿದೆ. ಅಂಕಪಟ್ಟಿಯ ಅಗ್ರ 4ರಲ್ಲಿ ಸ್ಥಾನ ಪಡೆಯಲು ರಿಷಭ್ ಪಂತ್ ಪಡೆ ಹೋರಾಡಲಿದೆ. ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ಮರುಮುಖಾಮುಖಿಯಲ್ಲಿ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ.
ಹಿಂದಿನ 5 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿ ಪ್ಲೇಆಫ್ ಅವಕಾಶ ವೃದ್ಧಿಸಿಕೊಂಡಿರುವ ಡೆಲ್ಲಿ ಇದುವರೆಗೆ ಆಡಿರುವ 10 ಪಂದ್ಯಗಳಲ್ಲಿ 5 ಗೆಲುವು, 5 ಸೋಲಿನೊಂದಿಗೆ 10 ಅಂಕ ಸಂಪಾದಿಸಿದೆ. ಇತ್ತ ಆರಂಭಿಕ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದ ಕೆಕೆಆರ್ ಕಳೆದ 3 ಪಂದ್ಯಗಳಲ್ಲಿ 2 ಸೋಲು ಅನುಭವಿಸಿದೆ. ಆಡಿರುವ 8 ಪಂದ್ಯಗಳಲ್ಲಿ 5 ಗೆಲುವು, 3 ಸೋಲಿನೊಂದಿಗೆ 10 ಅಂಕ ಕಲೆಹಾಕಿದೆ. ಆದರೆ ರನ್ರೇಟ್ನಲ್ಲಿ ಡೆಲ್ಲಿ ವಿರುದ್ಧ ಮೇಲುಗೈ ಸಾಧಿಸಿದೆ. ಪಂಜಾಬ್ ವಿರುದ್ಧ 261 ರನ್ ರಸಿಕೊಳ್ಳುವಲ್ಲಿ ವಿಫಲವಾದ ಕೆಕೆಆರ್ಗೆ ಬೌಲಿಂಗ್ ವಿಭಾಗ ತಲೆನೋವು ತಂದಿದೆ. ಈಡನ್ ಗಾರ್ಡನ್ಸ್ನಲ್ಲಿ ಮತ್ತೆ ರನ್ಮಳೆ ಹರಿಯುವ ಸಾಧ್ಯತೆಗಳಿದ್ದು, ಹಿಂದಿನ ಪಂದ್ಯದಲ್ಲಿ ಒಟ್ಟು 523 ರನ್, 42 ಸಿಕ್ಸರ್ಗಳಿಗೆ ಸಾಯಾಗಿತ್ತು. ಕೆಕೆಆರ್ ಒತ್ತಡದಲ್ಲಿ ಕಣಕ್ಕಿಳಿಯಲಿದ್ದು ಪ್ಲೇ ಆಫ್ಗೇರುವ ಹಾದಿಯಲ್ಲಿ ಮುಂದಿನ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್, ಲಖನೌ ಸೂಪರ್ ಜೈಂಟ್ಸ್ ಎದುರು ಕಠಿಣ ಸವಾಲು ಎದುರಾಗುವ ನಿರೀೆ ಇದೆ.
ಡೆಲ್ಲಿಗೆ ಬದಲಿ ಆಟಗಾರನ ಬಲ
ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಎನ್ಗಿಡಿ ಟೂರ್ನಿಯಿಂದ ಹೊರಬಿದ್ದ ಬಳಿಕ ಬದಲಿ ಆಟಗಾರನಾಗಿ ಡೆಲ್ಲಿ ಸೇರಿದ ಜೇಕ್ ಫ್ರೇಸರ್ ಮೆಕ್ಗುರ್ಕ್ ತಂಡದ ಯಶಸ್ಸಿನಲ್ಲಿ ಎಕ್ಸ್ ಪ್ಯಾಕ್ಟರ್ ಆಗಿದ್ದಾರೆ. ವಿಶ್ವ ಶ್ರೇಷ್ಠ ಬೌಲರ್ಗಳನ್ನು ಸರಾಗವಾಗಿ ದಂಡಿಸುವ ಫ್ರೇಸರ್, ಆಡಿರುವ 5 ಪಂದ್ಯಗಳಲ್ಲಿ 247 ರನ್ ಕಲೆಹಾಕಿದ್ದಾರೆ. ಮುಂಬೈ ಎದುರು ರನ್ಹೊಳೆ ಹರಿಸಿದ ಡೆಲ್ಲಿಗೆ ಗೆಲುವಿನೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ರಿಷಭ್ ಪಂತ್, ಟ್ರಸ್ಟಾನ್ ಸ್ಟಬ್ಸ್ ಸ್ಲಾಗ್ ಓವರ್ಗಳಲ್ಲಿ ಬೌಲರ್ಗಳಿಗೆ ಕಂಟಕವಾಗಿದ್ದಾರೆ.
ಮುಖಾಮುಖಿ: 33
ಡೆಲ್ಲಿ: 15
ಕೆಕೆಆರ್: 17
ರದ್ದು: 1
ನೇರಪ್ರಸಾರ: ಸ್ಟಾರ್ ಸ್ಪೋಟ್ಸ್, ಜಿಯೋ ಸಿನಿಮಾ .