ಕ್ರೀಡೆ

ಹಾಟ್​ ಬೆಡಗಿಯ ಫೋಟೋ ಲೈಕ್​: ಇಂಟರ್ನೆಟ್​ ಶೇಕ್​ ಮಾಡಿದ ಕೊಹ್ಲಿ - ಅವನೀತ್​ ಕೌರ್​ ಮೀಮ್ಸ್ ​| Memes

Memes : ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ ಇತ್ತೀಚೆಗೆ ನಟಿ ಅವನೀತ್ ಕೌರ್ ಫೋಟೋ ಲೈಕ್ ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಈ ಕುರಿತು ವಿರಾಟ್​ ಸ್ಪಷ್ಟನೆ ಕೊಟ್ಟಿದ್ದರು ಸಹ ಸಾಮಾಜಿಕ ಜಾಲತಾಣದಲ್ಲಿ ಮೀಮ್ಸ್​ ಹಾಗೂ ಟ್ರೋಲ್​ಗಳು​ ಇಂಟರ್ನೆಟ್ ಅನ್ನು ಶೇಕ್​ ಮಾಡಿದೆ.

ಐಪಿಎಲ್​ 2025ರ ಆವೃತ್ತಿಯಲ್ಲಿ ಬ್ಯುಸಿಯಾಗಿರುವ ವಿರಾಟ್ ಕೊಹ್ಲಿ ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಮಾಡೆಲ್ ಮತ್ತು ನಟಿ ಅವನಿತ್ ಕೌರ್ ಅವರ ಫೋಟೋವನ್ನು ಲೈಕ್ ಮಾಡಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ.

ಹೌದು, ಅವನೀತ್​ ಕೌರ್​ ಕೆಲ ದಿನಗಳಿಂದೆ ತನ್ನ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿದ್ದ ಹಾಟ್​ ಫೋಟೋಗೆ ವಿರಾಟ್​ ಲೈಕ್​ ಮಾಡಿದ್ದಾರೆ ಎಂದು ಅಭಿಮಾನಿಗಳು ಸ್ಕೀನ್​ ಶಾಟ್​ ಶೇರ್​ ಮಾಡಿದ್ದಾರೆ. ಇದೀಗ ಅದೇ ಸ್ಕ್ರೀನ್​ಶಾಟ್​ ಭಾರಿ ವೈರಲ್​ ಆಗಿದೆ.

ವಿರಾಟ್​ ಕೊಹ್ಲಿ ಸ್ಪಷ್ಟನೆ

ಇನ್‌ಸ್ಟಾಗ್ರಾಮ್ ಅಲ್ಗಾರಿದಮ್‌ನಲ್ಲಿನ ದೋಷದಿಂದಾಗಿ ಇದು ಸಂಭವಿಸಿದೆ, ಅವರ ಫೀಡ್ ಅನ್ನು ಅಳಿಸುವಾಗ ಅಲ್ಗಾರಿದಮ್ ತಪ್ಪಾಗಿದೆ ಮತ್ತು ಇದರ ಹಿಂದೆ ಬೇರೆ ಯಾವುದೇ ಉದ್ದೇಶವಿಲ್ಲ. ಈ ವಿಷಯದ ಬಗ್ಗೆ ಯಾವುದೇ ಊಹಾಪೋಹಗಳನ್ನು ಹರಡಬೇಡಿ. ಇದನ್ನು ಎಲ್ಲರೂ ಅರ್ಥಮಾಡಿಕೊಳ್ಳುತ್ತಾರೆಂದು ಭಾವಿಸುತ್ತೇನೆ ಎಂದು ಕೊಹ್ಲಿ ಹೇಳಿದರು. ಸ್ಪಷ್ಟನೆ ಕೊಟ್ಟರು ಸಹ ವಿರಾಟ್​-ಕೌರ್​ ಮಿಮ್ಸ್​ ಭಾರೀ ಸದ್ದು ಮಾಡುತ್ತಿದೆ.

ಲೈಕ್ ಮಾಡಿದ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳು ಎಕ್ಸ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಹರಡಲು ಪ್ರಾರಂಭಿಸಿದ್ದು, ಅಭಿಮಾನಿಗಳು ಮತ್ತು ಮೀಮ್ ರಚನೆಕಾರರಿಂದ ಹಾಸ್ಯಮಯ ಪ್ರತಿಕ್ರಿಯೆಗಳ ಅಲೆಯನ್ನು ಹುಟ್ಟುಹಾಕಿದವು.(ಏಜೆನ್ಸೀಸ್​)