ಬೆಂಗಳೂರು: ಅಥ್ಲೀಟ್ ಪ್ರಿಯಾ ಮೋಹನ್, ಬ್ಯಾಡ್ಮಿಂಟನ್ ತಾರೆ ಮಿಥುನ್ ಮಂಜುನಾಥ್ ಸಹಿತ ರಾಜ್ಯದ 15 ಕ್ರೀಡಾಪಟುಗಳು ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ (ಕೆಒಎ) 2023ರ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಂಗಳವಾರ ಸಂಜೆ 4.30ರಿಂದ ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ತಾವರ್ಚಂದ್ ಗೆಹಲೋತ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಹಾಜರಿರಲಿದ್ದಾರೆ. 4 ಮಾಜಿ ಕ್ರೀಡಾಪಟುಗಳು ಕೂಡ ಕೆಒಎ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜತೆಗೆ ಏಷ್ಯನ್ ಗೇಮ್ಸ್ನಲ್ಲಿ ಪದಕ ಗೆದ್ದ 8 ಕ್ರೀಡಾಪಟುಗಳನ್ನು ಕೆಒಎ ವತಿಯಿಂದ ಸನ್ಮಾನಿಸಲಾಗುವುದು. ಕೆಒಎ ಪ್ರಶಸ್ತಿ ಒಂದು ಲಕ್ಷ ರೂ. ನಗದು ಬಹುಮಾನ ಮತ್ತು ಸ್ಮರಣಿಕೆ ಒಳಗೊಂಡಿದೆ.
ಕೆಒಎ ಪ್ರಶಸ್ತಿ ವಿಜೇತರು: ಪ್ರಿಯಾ ಮೋಹನ್ (ಅಥ್ಲೆಟಿಕ್ಸ್), ಮಿಥುನ್ ಮಂಜುನಾಥ್ (ಬ್ಯಾಡ್ಮಿಂಟನ್), ಮನೋಜ್ ಬಿ.ಎಂ. (ಬಾಸ್ಕೆಟ್ಬಾಲ್), ಸಂಪತ್ ವಿ ಪಸಮೆಲ್ (ಸೈಕ್ಲಿಂಗ್, ಸಾತ್ವಿಕ್ ಎಸ್ಎಂ. (ೆನ್ಸಿಂಗ್), ಸೋಮ್ಕುಮಾರ್ (ುಟ್ಬಾಲ್), ಪಿ.ಎಸ್. ಶ್ರೀವರ್ಷಿಣಿ (ಜಿಮ್ನಾಸ್ಟಿಕ್ಸ್), ಕಾಮೇಶ್ವರನ್ ಎಂ. (ಕಯಾಕಿಂಗ್-ಕನೋಯಿಂಗ್), ಮನೀಷ್ ಜಿ. (ಲಾನ್ ಟೆನಿಸ್), ಆಭರಣ್ ಸುದೇವ್ (ಹಾಕಿ), ಗಗನ ಕೆಎಸ್ (ನೆಟ್ಬಾಲ್), ತಿಲೋತ್ತಮ ಸೇನ್ (ಶೂಟಿಂಗ್), ತನಿಷ್ ಜಾರ್ಜ್ ಮ್ಯಾಥ್ಯೂ (ಈಜು), ಪ್ರೀತಂ ಆರ್. (ಟೇಕ್ವಾಂಡೊ), ಉಷಾ ಬಿಎನ್ (ವೇಟ್ಲಿಫ್ಟಿಂಗ್), ಎಸ್. ವೆಂಕಟೇಶ್ ಪ್ರಸಾದ್ (ಬ್ಯಾಡ್ಮಿಂಟನ್ ಮಾಜಿ ಆಟಗಾರ), ಧನಂಜಯನ್ ಬಿ. (ಮಾಜಿ ಬಾಕ್ಸರ್), ಸಿಎಸ್ ಪೂಣಚ್ಚ (ಮಾಜಿ ಹಾಕಿ ಆಟಗಾರ), ಬಿಆರ್ ಗೋಪಾಲ್ ರಾವ್ (ಮಾಜಿ ಈಜುಪಟು), ಗಿರೀಶ್ ದೊಡ್ಡಮನಿ (ಕ್ರೀಡಾ ಪತ್ರಕರ್ತ), ನರಸಿಂಹ (ಛಾಯಾಗ್ರಾಹಕ), ಜೆ. ರವೀಂದ್ರ ಸಿಂಗ್ (ಕ್ರೀಡಾ ಆಡಳಿತ).