ಬೆಂಗಳೂರು: ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಐಪಿಎಲ್ ಮಧ್ಯದಲ್ಲಿಯೇ ಸ್ಥಗಿತಗೊಳ್ಳುವುದಕ್ಕೂ ಮೊದಲೇ ಹೊಟ್ಟೆನೋವಿನಿಂದಾಗಿ ತಂಡ ತೊರೆದಿದ್ದರು. ಕರ್ನಾಟಕದ ಕೆಎಲ್ ರಾಹುಲ್ ಪಂಜಾಬ್ ಕಿಂಗ್ಸ್ ತಂಡ ಮುನ್ನಡೆಸಿದ್ದರು. ಹೊಟ್ಟೆನೋವಿನಿಂದ ಹೊರಬಿದ್ದ ರಾಹುಲ್ ಬಳಿಕ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ಬಳಿಕ ರಾಹುಲ್ 10 ದಿನಗಳೊಳಗೆ ಪಂಜಾಬ್ ತಂಡ ಕೂಡಿಕೊಳ್ಳುತ್ತಾರೆ ಎಂದು ಹೇಳಲಾಗಿದ್ದರೂ ಕೋವಿಡ್ನಿಂದಾಗಿ ಐಪಿಎಲ್ ಟೂನಿರ್ಯನ್ನೇ ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಇದೀಗ ಸಂಪೂರ್ಣ ಗುಣಮುಖರಾಗಿರುವ ರಾಹುಲ್ ತಮ್ಮ ನೆಚ್ಚಿನ ನಾಯಿ ಮರಿಗಳೊಂದಿಗೆ ಕಾಲಕಳೆಯುತ್ತಿದ್ದಾರೆ. ತಮ್ಮ ಮುದ್ದಿ ನಾಯಿಗಳೊಂದಿಗೆ ಇರುವ ಫೋಟೋವನ್ನು ರಾಹುಲ್ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದಾರೆ.
ಟೂನಿರ್ಯ ಮಧ್ಯದಲ್ಲಿಯೇ ರಾಹುಲ್ಗೆ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತಣವೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಆದರೆ, ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈಗೆ ಸ್ಥಳಾಂತರಿಸಲಾಗಿತ್ತು. ಮುಂಬೈನಲ್ಲಿ ರಾಹುಲ್ ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಳಿಕ ಐಪಿಎಲ್ ಮುಂದೂಡಿಕೆಯಾದ ಹಿನ್ನೆಲೆಯಲ್ಲಿ ತವರಿಗೆ ವಾಪಸಾಗಿದ್ದರು.
ರಾಹುಲ್ ಇನ್ಸ್ಟಾದಲ್ಲಿ ಫೋಟೋ ಪ್ರಕಟಿಸಿದ ಬೆನ್ನಲ್ಲೇ ಲಾಂತರ ಅಭಿಮಾನಿಗಳು ಪ್ರತಿಕ್ರಿಯಿಸಿ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಸುಮಾರು 9 ಲಕ್ಷದಷ್ಟು ಮಂದಿ ರಾಹುಲ್ ಫೋಟೋಗೆ ಲೈಕ್ ಹಾಗೂ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.