IND vs ENG Test: ಪ್ರಸಕ್ತ ಆಂಗ್ಲರ ನೆಲದಲ್ಲಿ ನಡೆಯುತ್ತಿರುವ ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಟೆಸ್ಟ್ ಹೆಡಿಂಗ್ಲಿಯಲ್ಲಿ ನಡೆಯುತ್ತಿದ್ದು, 4ನೇ ದಿನದ ಪಂದ್ಯದಲ್ಲಿ ಭಾರತ ಮುಂಚೂಣಿಯಲ್ಲಿದೆ. ತಂಡದ ಪರ ಶತಕ ಬಾರಿಸಿದ ಕನ್ನಡಿಗ ಕೆ.ಎಲ್. ರಾಹುಲ್, ಆಂಗ್ಲರ ನಾಡಿನಲ್ಲಿ ಭರ್ಜರಿ ಇನ್ನಿಂಗ್ಸ್ನತ್ತ ಸಾಗಿದ್ದಾರೆ.
ಇದನ್ನೂ ಓದಿ: ಫ್ಲಾಪ್ ಸಾಲಿಗೆ ಕಮಲ್ ಹಾಸನ್ ‘ಥಗ್ ಲೈಫ್’! ಚಿತ್ರದ ಸೋಲು ಕುರಿತು ಕಡೆಗೂ ಮೌನಮುರಿದ ಮಣಿರತ್ನಂ | Thug Life
ಕೆ.ಎಲ್. ರಾಹುಲ್ ಶತಕದ ಬೆನ್ನಲ್ಲೇ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸುತ್ತಿರುವ ಟೀಮ್ ಇಂಡಿಯಾ ಉಪನಾಯಕ ರಿಷಭ್ ಪಂತ್ ಕೂಡ ಶತಕ ಬಾರಿಸಿದ್ದಾರೆ. ಮೊದಲ ದಿನವೇ ಆಕರ್ಷಕ ಶತಕ ದಾಖಲಿಸಿ, ಪಲ್ಟಿ ಹೊಡೆದು ಸಂಭ್ರಮಿಸಿದ್ದ ಪಂತ್, ನಾಲ್ಕನೇ ದಿನದ ಆಟದಲ್ಲಿಯೂ ತಂಡದ ಪರ ಉತ್ತಮ ಇನ್ನಿಂಗ್ಸ್ ನೀಡಿದ್ದಾರೆ. ಟೆಸ್ಟ್‌ನಲ್ಲಿ ರಾಹುಲ್ ದಾಖಲಿಸಿದ ಒಂಬತ್ತನೇ ಶತಕ ಇದಾಗಿದೆ.