ಬೆಂಗಳೂರು: ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮ, ಮನೀಷ್ ಪಾಂಡೆ-ಆಶ್ರಿತಾ ಶೆಟ್ಟಿ ಬಳಿಕ ಹಾಲಿ ತಂಡದಲ್ಲಿ ಮತ್ತೊಂದು ಕ್ರಿಕೆಟ್-ಬಾಲಿವುಡ್ ಜೋಡಿಯಾಗುವ ಲಕ್ಷಣ ಕಂಡಿದೆ.
ಕರ್ನಾಟಕದ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ನಟ ಸುನೀಲ್ ಶೆಟ್ಟಿಯ ಪುತ್ರಿ ಆಥಿಯಾ ಶೆಟ್ಟಿ ಪ್ರೀತಿ-ಪ್ರೇಮದ ಗುಸುಗುಸು ಹರಡಿದೆ. ತಾವಿಬ್ಬರೂ ಸ್ನೇಹಿತರು ಎಂದು ಹೇಳಿಕೊಳ್ಳುವ ಈ ಜೋಡಿ ಈಗ ಥಾಯ್ಲೆಂಡ್ನಲ್ಲಿ ಜತೆಯಾಗಿ ಬಿಡುವಿನ ದಿನಗಳನ್ನು ಕಳೆಯುತ್ತಿದ್ದಾರೆ. ಅಲ್ಲಿನ ಬೀಚ್ಗಳಲ್ಲಿ ಸುತ್ತುತ್ತಿರುವ ಚಿತ್ರಗಳನ್ನು ಇಬ್ಬರೂ ಇನ್ಸ್ಟಾಗ್ರಾಂನ ಪುಟದಲ್ಲಿ ಹಂಚಿಕೊಂಡಿದ್ದಾರೆ.