ಕ್ರೀಡೆ

ಇದೊಂದು ಘಳಿಗೆಯಿಂದ ಬದಲಾಯ್ತು ಕನ್ನಡಿಗನ ಅದೃಷ್ಟ! ತವರಿನಲ್ಲೇ ಕೆ.ಎಲ್​. ರಾಹುಲ್​ ಅಬ್ಬರ | KL Rahul

KL Rahul: ಈ ಬಾರಿ ಐಪಿಎಲ್ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿರುವ ಕನ್ನಡಿಗ ಕೆ.ಎಲ್​. ರಾಹುಲ್​, ನಿನ್ನೆ (ಏ.10) ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಎದುರು ಅಬ್ಬರಿಸಿದ್ದು, ಅಭಿಮಾನಿಗಳ ಕಣ್ಣಿನಲ್ಲಿ ಈಗಲೂ ಕಟ್ಟಿದಂತಿದೆ. ಆರ್​ಸಿಬಿ ನೀಡಿದ್ದ ಸಾಧಾರಣ ಗುರಿಯನ್ನು ಬಹಳ ಸುಲಭವಾಗಿ ಬೆನ್ನಟ್ಟಿದ ಡಿಸಿ ಪಡೆಗೆ, ಬ್ಯಾಟರ್​ ಕೆ.ಎಲ್​. ರಾಹುಲ್​ ಅವರ ಅಜೇಯ 93 ರನ್​ಗಳ ಸ್ಫೋಟಿಂಗ್ ಬ್ಯಾಟಿಂಗ್​ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟಿತು. ಈ ಪಂದ್ಯದಲ್ಲಿ ಸೋಲಿಗೆ ಶರಣಾಗಬೇಕಿದ್ದ ಡಿಸಿಗೆ ಉಸಿರು ಕೊಟ್ಟಿದ್ದೇ ಕನ್ನಡಿಗ ಎಂಬುದು ಕ್ರಿಕೆಟ್​ ಅಭಿಮಾನಿಗಳ ಮೆಚ್ಚುಗೆ.

ಆರ್​ಸಿಬಿ ನೀಡಿದ್ದ 164 ರನ್ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್​ಗೆ ಆರಂಭಿಕರಾದ ಫಾಫ್ ಡು ಪ್ಲೆಸಿಸ್​ ಮತ್ತು ಜೇಕ್​ ಫ್ರೆಸರ್​ ಉತ್ತಮ ಓಪನಿಂಗ್ ಕೊಡುಗೆ ನೀಡುವಲ್ಲಿ ವಿಫಲರಾದರು. ಇವರಿಬ್ಬರ ನಂತರದಲ್ಲಿ ಬಂದ ಅಭಿಷೇಕ್ ಪೋರೆಲ್​ ಕೂಡ 7 ರನ್​ಗೆ ಪೆವಿಲಿಯನ್​ನತ್ತ ಮುಖ ಮಾಡಿದರು. ಇನ್ನೇನು ಪಂದ್ಯ ವಶಪಡಿಸಿಕೊಂಡೆವು ಎಂಬ ಸಂಭ್ರಮದ ಛಾಯೆ ಆರ್​ಸಿಬಿ ಆಟಗಾರರ ಮುಖದಲ್ಲಿ ಮೂಡುವ ಮೊದಲೇ ಕೆ.ಎಲ್​. ರಾಹುಲ್​ ಅವರ ಸ್ಫೋಟಕ ಬ್ಯಾಟಿಂಗ್​ ಅದೆನ್ನೆಲ ಅಳಿಸಿ ಹಾಕಿತು. ತವರಿನಲ್ಲೇ ಅಬ್ಬರಿಸುವ ಮೂಲಕ ಕನ್ನಡಿಗ ಮಿಂಚಿದ ರೀತಿಗೆ ಕನ್ನಡಿಗರು ಫಿದಾ ಆದರು.

ಇನ್ನು ಪಂದ್ಯವನ್ನು ರೋಚಕವಾಗಿ ಗೆದ್ದು ಬೀಗಿದ ರಾಹುಲ್​, ತಮ್ಮ ಬ್ಯಾಟ್​ನಿಂದ ಇದು ನನ್ನ ನೆಲ. ನನ್ನ ತವರೂರು ಎಂಬುದನ್ನು ಸಾರಿದರು. ಬೆಂಗಳೂರಿನ ಹುಡುಗ ಆಡಿದ ರೀತಿಗೆ ಸಂತಸಪಟ್ಟ ಕನ್ನಡಿಗರು, ಕೆ.ಎಲ್​. ರಾಹುಲ್​ ಗೆಲುವಿನ ಸಂಭ್ರಮದಲ್ಲಿ ಜತೆಯಾದರು. ಆರ್​ಸಿಬಿ ಸೋತರೂ ಗೆದ್ದಿದ್ದು ಅಲ್ಲೊಬ್ಬ ಕನ್ನಡಿಗನೇ ಎಂಬ ಸಾರ್ಥಕತೆ ಫ್ರಾಂಚೈಸಿಯ ಅಭಿಮಾನಿಗಳಲ್ಲಿ ಮೂಡಿತು. ಮಗಳು ಹುಟ್ಟಿದ್ದೇ ತಡ ರಾಹುಲ್​ ಅವರ ಅದೃಷ್ಟವೇ ಬದಲಾಗಿದೆ. ಅಥಿಯಾ ಶೆಟ್ಟಿ ಮತ್ತು ರಾಹುಲ್​ ದಂಪತಿಗೆ ಹೆಣ್ಣುಮಗು ಜನನ ಅವರಿಗೆ ಅದೃಷ್ಟದ ಭಂಡಾರವನ್ನು ಹೊತ್ತು ತಂದಿದೆ ಎಂದೇ ಹೇಳಬಹುದು.