ದುಬೈ: ವೇಗಿಗಳಾದ ಕ್ರಿಸ್ ಜೋರ್ಡನ್ (17ಕ್ಕೆ 3) ಹಾಗೂ ಅರ್ಷದೀಪ್ ಸಿಂಗ್ (23ಕ್ಕೆ 3) ಜೋಡಿ ಡೆತ್ ಓವರ್ಗಳಲ್ಲಿ ತೋರಿದ ಅದ್ಭುತ ನಿರ್ವಹಣೆ ಲವಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಐಪಿಎಲ್-13ರ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 12 ರನ್ಗಳಿಂದ ಮಣಿಸಿತು. ಇದರೊಂದಿಗೆ ಲೀಗ್ನಲ್ಲಿ ಸತತ 4ನೇ ಜಯ ದಾಖಲಿಸಿದ ಕನ್ನಡಿಗ ಕೆಎಲ್ ರಾಹುಲ್ ಪಡೆ ಪ್ಲೇಆಫ್ ಹಂತದ ಆಸೆಯನ್ನು ಜೀವಂತವಾಗಿರಿಸಿಕೊಂಡರೆ, ಸನ್ರೈಸರ್ಸ್ ತಂಡದ ಮುಂದಿನ ಹಾದಿ ಬಹುತೇಕ ಕಮರಿತು. ಸನ್ರೈಸರ್ಸ್ ಕೇವಲ 14 ರನ್ಗಳ ಅಂತರದಲ್ಲಿ ಕೊನೆಯ 7 ವಿಕೆಟ್ ಕೈಚೆಲ್ಲಿ ಸೋಲಿಗೆ ಶರಣಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, 7 ವಿಕೆಟ್ಗೆ 126 ರನ್ಗಳಿಸಿತು. ಪ್ರತಿಯಾಗಿ ಬಿರುಸಿನ ಆರಂಭದ ನಡುವೆಯೂ ಸನ್ರೈಸರ್ಸ್ ತಂಡ 19.5 ಓವರ್ಗಳಲ್ಲಿ 114 ರನ್ಗಳಿಗೆ ಸರ್ವಪತನ ಕಂಡಿತು.