ಚಟ್ಟೋಗ್ರಾಮ್: ಬಾಂಗ್ಲಾದೇಶ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ದ್ವಿಶತಕ ಸಿಡಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ಮಿಂಚಿದರು.
ಎರಡನೇ ವಿಕೆಟ್ಗೆ ಇಶಾನ್ ಕಿಶನ್ ಜತೆಗೂಡಿದ ಕೊಹ್ಲಿ, ಆರಂಭದಲ್ಲಿ ಇಶಾನ್ಗೆ ಸಾಥ್ ನೀಡುತ್ತಾ ಬಂದರು. ದ್ವಿಶತಕದೊಂದಿಗೆ 210 ರನ್ ಗಳಿಸಿ ಕಿಶನ್ ಔಟ್ ಆಗುತ್ತಿದ್ದಂತೆ, ಕೊಹ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ತಮ್ಮ ಶತಕ ಪೂರೈಸಿದರು. ಇದರೊಂದಿಗೆ ಏಕದಿನ ಪಂದ್ಯದಲ್ಲಿ ಕೊಹ್ಲಿ 44ನೇ ಶತಕ ದಾಖಲಿಸಿದರು.
ವಿರಾಟ್ ಕೊಹ್ಲಿ 86 ಬಾಲ್ಗಳಲ್ಲಿ ಒಂದು ಸಿಕ್ಸರ್ ಹಾಗೂ ಹನ್ನೊಂದು ಫೋರ್ ಸಿಡಿಸಿ ಶತಕ ಪೂರೈಸಿದರು.