ಕ್ರೀಡೆ

ಏನಾಯ್ತು ನಿಮ್ಮ ಕ್ರಿಕೆಟ್​ಗೆ? ಕೆವಿನ್ ಪೀಟರ್ಸನ್ ಪ್ರಶ್ನೆಗಳಿಗಿಲ್ಲ ಉತ್ತರ! ಗಪ್​ಚುಪ್​ ಆದ ಪಾಕ್​ ಆಟಗಾರರು

ರಾವಲ್​ಪಿಂಡಿ: ಇತ್ತೀಚೆಗಷ್ಟೇ ಎರಡು ಪಂದ್ಯಗಳ ಮೊದಲ ಟೆಸ್ಟ್​ ಸರಣಿಯಲ್ಲಿ ಬಾಂಗ್ಲಾದೇಶ ವಿರುದ್ಧ 10 ವಿಕೆಟ್​ಗಳ ಅಂತರದಿಂದ ಹೀನಾಯವಾಗಿ ಸೋತ ಪಾಕಿಸ್ತಾನ, ತಮ್ಮನ್ನು ನಿರಂತರವಾಗಿ ಬೆಂಬಲಿಸಿಕೊಂಡು ಬಂದ ಕ್ರಿಕೆಟ್ ಅಭಿಮಾನಿಗಳಿಗೆ ಭಾರೀ ನಿರಾಸೆ ಮೂಡಿಸಿತು. ಪಾಕ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಗೆದ್ದ ಬಾಂಗ್ಲಾ, ಈ ಹಿಂದೆ ನಡೆದ 13 ಮ್ಯಾಚ್​ಗಳ ಪೈಕಿ 12 ಬಾರಿ ಸೋಲುಂಡಿದ್ದರೆ, ಒಂದರಲ್ಲಿ ಡ್ರಾ ಕಂಡಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡಕ್ಕೆ ಬೆವರಿಳಿಸಿದ್ದು, ಐತಿಹಾಸಿಕ ಗೆಲುವು ದಾಖಲಿಸುವ ಮುಖೇನ ವಿಜಯ ಪತಾಕೆ ಹಾರಿಸಿತು. ಸದ್ಯ ಪಾಕ್ ತಂಡದ ಕಳಪೆ ಪ್ರದರ್ಶನವನ್ನು ಪ್ರಶ್ನಿಸಿದ ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಕೆವಿನ್​ ಪೀಟರ್ಸನ್, ಇಂತಹ ಹೀನಾಯ ಸೋಲಿಗೆ ಕಾರಣವೇನು ಎಂದಿದ್ದಾರೆ.

ಪಾಕಿಸ್ತಾನ ಕ್ರಿಕೆಟ್​ಗೆ ಏನಾಗಿದೆ? ನಾನು ಪಿಎಸ್​ಎಲ್​ ಲೀಗ್​ನಲ್ಲಿ ಆಡಿದ್ದ ವೇಳೆ ಪಾಕ್ ಆಟಗಾರರ ಅತ್ಯುತ್ತಮ ಪ್ರದರ್ಶನ ನೋಡಿದ್ದೀನಿ. ಯಂಗ್​​ಸ್ಟರ್ಸ್​​ಗಳು ಮಾಡುತ್ತಿದ್ದ ಕಮಾಲ್​, ಸ್ಟಾರ್​ ಕ್ರಿಕೆಟಿಗರು ಕೊಡುತ್ತಿದ್ದ ಅದ್ಭುತ ಇನ್ನಿಂಗ್ಸ್​ ಈಗ ಎಲ್ಲಿ ಹೋಯ್ತು? ಎಂದು ಕೆವಿನ್​ ಒಂದಷ್ಟು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಆದ್ರೆ, ಪೀಟರ್ಸನ್ ಕೇಳಿದ ಯಾವ ಪ್ರಶ್ನೆಗಳಿಗೂ ಪಾಕ್​ ಆಟಗಾರರಿಂದ ಉತ್ತರ ಲಭಿಸಿಲ್ಲ. ಇನ್ನು ಈ ಮಧ್ಯೆ ಇವರ ಕಳಪೆ ಆಟದಿಂದ ಪಾಕಿಸ್ತಾನ ಕ್ರಿಕೆಟ್​ ಹೆಸರು ಹಾಳಾಯಿತು ಎಂದು ಮಾಜಿ ಕ್ರಿಕೆಟಿಗ ರಮೀಜ್ ರಾಜಾ ಕೊಟ್ಟ ಹೇಳಿಕೆ ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ.

"ಪಾಕಿಸ್ತಾನ ವೇಗಿಗಳಿಗೆ ಹೋಲಿಸಿದರೆ ಬಾಂಗ್ಲಾ ಬೌಲರ್​ಗಳು ಉತ್ತಮ. ನಮ್ಮ ದೇಶಕ್ಕಿದ್ದ ಕೀರ್ತಿ, ಹೆಸರನ್ನು ಇದೊಂದು ಪಂದ್ಯದಿಂದ ಸಂಪೂರ್ಣವಾಗಿ ಹಾಳು ಮಾಡಿದ್ದಾರೆ ಇವರು. ಪಾಕ್​ ಬೌಲರ್​ಗಳ ಅವನತಿ ಪ್ರಾರಂಭವಾಗಿದ್ದೇ ಟೀಮ್ ಇಂಡಿಯಾ ಬ್ಯಾಟರ್​ಗಳಿಂದ. 2023ರ ಏಷ್ಯಾ ಕಪ್​ನಲ್ಲಿ ನಮ್ಮ ವೇಗಿಗಳು ಭಾರತೀಯ ಬ್ಯಾಟ್ಸ್​ಮನ್​ಗಳ ವಿಕೆಟ್​ ಪಡೆಯುವುದಕ್ಕಿಂತಲೂ ರನ್​ಗಳು ಕೊಟ್ಟಿದ್ದೇ" ಇಂದು ಇಂತಹ ಕಳಪೆ ಪ್ರದರ್ಶನಕ್ಕೆ ಕಾರಣವಾಗಿದೆ ಎಂದಿದ್ದಾರೆ,(ಏಜೆನ್ಸೀಸ್).