ಕ್ರೀಡೆ

ಡಬ್ಲ್ಯುಪಿಎಲ್​ನಲ್ಲಿ ಕರ್ನಾಟಕದ ಶ್ರೇಯಾಂಕಾ ಪಾಟೀಲ್​, ನಿಕಿ ಪ್ರಸಾದ್​ ರಿಟೇನ್​

ಮುಂಬೈ: ಕರ್ನಾಟಕದ ಆಲ್ರೌಂಡರ್​ ಶ್ರೇಯಾಂಕಾ ಪಾಟೀಲ್​ ಹಾಗೂ 19 ವಯೋಮಿತಿ ವಿಶ್ವಕಪ್​ ಗೆದ್ದ ಭಾರತ ತಂಡದ ನಾಯಕಿ ನಿಕಿ ಪ್ರಸಾದ್​ ಅವರನ್ನು ಮುಂಬರುವ 4ನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ಗೆ (ಡಬ್ಲುಪಿಎಲ್​) ಕ್ರಮವಾಗಿ ಆರ್​ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್​ ತಂಡಗಳು ರಿಟೇನ್​ ಮಾಡಿಕೊಂಡಿವೆ.

ಭಾರತ ತಂಡದ ನಾಯಕಿ ಹರ್ಮಾನ್​ಪ್ರೀತ್​ ಕೌರ್​, ಸ್ಮೃತಿ ಮಂದನಾರನ್ನು ಮುಂಬೈ, ಆರ್​ಸಿಬಿ ತಂಡಗಳು ಉಳಿಸಿಕೊಂಡಿದ್ದು, ಡೆಲ್ಲಿ ತಂಡ ನಾಯಕಿ ಮೆಗ್​ ಲ್ಯಾನಿಂಗ್​ ಮತ್ತು ಯುಪಿ ವಾರಿಯರ್ಸ್​ ತಂಡ ದೀಪ್ತಿ ಶರ್ಮರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದೆ. ನ.27ಕ್ಕೆ ಆಟಗಾರ್ತಿಯರ ಮೆಗಾ ಹರಾಜು ನಡೆಯಲಿದೆ.

ಸ್ಮೃತಿ ಮಂದನಾ, ನ್ಯಾಟ್​ ಸೀವರ್​ ಬ್ರಂಟ್​ ಮತ್ತು ಆಶ್ಲೆ ಗಾರ್ಡ್​ನರ್​ ಸರ್ವಾಧಿಕ 3.5 ಕೋಟಿ ರೂ. ಮೊತ್ತಕ್ಕೆ ರಿಟೇನ್​ ಆಗಿದ್ದಾರೆ.

ರಿಟೇನ್​ ಆಟಗಾರ್ತಿರು: ಮುಂಬೈ ಇಂಡಿಯನ್ಸ್​: ಹರ್ಮಾನ್​ಪ್ರೀತ್​ ಕೌರ್​ (2.5 ಕೋಟಿ ರೂ.), ನ್ಯಾಟ್​ ಸೀವರ್​ ಬ್ರಂಟ್​ (3.5 ಕೋಟಿ ರೂ), ಅಮನ್​ಜೋತ್​ ಕೌರ್​ (1 ಕೋಟಿ ರೂ.), ಜಿ.ಕಮಿಲಿನಿ (50 ಲಕ್ಷ ರೂ.), ಹ್ಯಾಲೆ ಮ್ಯಾಥ್ಯೂಸ್​ (1.75 ಕೋಟಿ ರೂ.);

ಡೆಲ್ಲಿ ಕ್ಯಾಪಿಟಲ್ಸ್​: ಅನ್ನಾಬೆಲ್​ ಸುದರ್​ಲ್ಯಾಂಡ್​ (2.2 ಕೋಟಿ ರೂ), ಮಾರಿಜಾನ್ನೆ ಕಾಪ್​ (2.2 ಕೋಟಿ ರೂ), ಜೆಮೀಮಾ ರೋಡ್ರಿಗಸ್​ (2.2 ಕೋಟಿ ರೂ.), ಶೆಾಲಿ ವರ್ಮ (2.2 ಕೋಟಿ ರೂ.), ನಿಕಿ ಪ್ರಸಾದ್​ (50 ಲಕ್ಷ ರೂ);

ಆರ್​ಸಿಬಿ: ಸ್ಮೃತಿ ಮಂದನಾ (3.5 ಕೋಟಿ ರೂ), ಎಲ್ಲಿಸ್​ ಪೆರ್ರಿ (2 ಕೋಟಿ ರೂ), ರಿಚಾ ಘೋಷ್​ (2.75 ಕೋಟಿ ರೂ), ಶ್ರೇಯಾಂಕಾ ಪಾಟೀಲ್​ (60 ಲಕ್ಷ ರೂ);

ಗುಜರಾತ್​ ಜೈಂಟ್ಸ್​: ಆಶ್ಲೇ ಗಾರ್ಡ್​ನರ್​ (3.5 ಕೋಟಿ ರೂ), ಬೆಥ್​ ಮೂನಿ (2.5 ಕೋಟಿ ರೂ;

ಯುಪಿ ವಾರಿಯರ್ಸ್​: ಶ್ವೇತಾ ಸೆಹ್ರಾವತ್​ (50 ಲಕ್ಷ ರೂ.).