ಕ್ರೀಡೆ

ಕರ್ನಾಟಕ ಟಿ20 ತಂಡಕ್ಕೆ ಕರುಣ್ ನಾಯರ್ ಸಾರಥ್ಯ

ವಿಜಯವಾಣಿ ಸುದ್ದಿಜಾಲ, ಬೆಂಗಳೂರು

ಅನುಭವಿ ಬ್ಯಾಟ್ಸ್‌ಮನ್ ಕರುಣ್ ನಾಯರ್, ಜನವರಿ 10 ರಿಂದ ಆರಂಭವಾಗಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗೆ ಕರ್ನಾಟಕ ತಂಡ ಮುನ್ನಡೆಸಲಿದ್ದಾರೆ. ರಾಜ್ಯ ಆಯ್ಕೆ ಸಮಿತಿ ಮುಖ್ಯಸ್ಥ ಫಜಲ್ ಖಲೀಲ್ ಸಾರಥ್ಯದ ಆಯ್ಕೆ ಸಮಿತಿ ಭಾನುವಾರ 20 ಸದಸ್ಯರ ಕರ್ನಾಟಕ ತಂಡ ಪ್ರಕಟಿಸಿತು. ಮನೀಷ್ ಪಾಂಡೆ ಮೊಣಕೈ ಗಾಯದ ಸಮಸ್ಯೆಯಿಂದ ಅಲಭ್ಯರಾದ ಹಿನ್ನೆಲೆಯಲ್ಲಿ ಕರುಣ್ ನಾಯರ್‌ಗೆ ನಾಯಕತ್ವ ಜವಾಬ್ದಾರಿ ಒಲಿದಿದೆ. ಆಲ್ರೌಂಡರ್ ಪವನ್ ದೇಶಪಾಂಡೆ ಅವರನ್ನು ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ.

ಜನವರಿ 10 ರಿಂದ 18 ರವರೆಗೆ ಬೆಂಗಳೂರು ಹೊರವಲಯ ಆಲೂರಿನಲ್ಲಿ ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, ಕರ್ನಾಟಕ ತಂಡ ಎಲೈಟ್ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಜನವರಿ 10 ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಕರುಣ್ ನಾಯರ್ ಪಡೆ ಜಮ್ಮು ಕಾಶ್ಮೀರ ತಂಡವನ್ನು ಎದುರಿಸಲಿದೆ.

ತಂಡ: ಕರುಣ್ ನಾಯರ್ (ನಾಯಕ), ದೇವದತ್ ಪಡಿಕಲ್, ರೋಹನ್ ಕದಂ, ಪವನ್ ದೇಶಪಾಂಡೆ (ಉಪನಾಯಕ), ಸಿದ್ದಾರ್ಥ್ ಕೆವಿ, ಶ್ರೀಜಿತ್ ಕೆಎಲ್ (ವಿಕೀ), ಶರತ್ ಬಿಆರ್ (ವಿಕೀ), ಅನಿರುದ್ಧ್ ಜೋಶಿ, ಶ್ರೇಯಸ್ ಗೋಪಾಲ್, ಕೆ.ಗೌತಮ್, ಸುಚಿತ್.ಜೆ, ಪ್ರವೀಣ್ ದುಬೆ, ಮಿಥುನ್ ಎ, ಪ್ರಸಿದ್ಧ್ ಕೃಷ್ಣ, ಪ್ರತೀಕ್ ಜೈನ್, ವಿ.ಕೌಶಿಕ್, ರೋನಿತ್ ಮೋರೆ, ದರ್ಶನ್ ಎಂಬಿ, ಮನೋಜ್ ಬಾಂಡಗೆ, ಶುಭಾಂಗ್ ಹೆಗ್ಡೆ.

ಕೋಚ್: ಯರೇಗೌಡ, ಬೌಲಿಂಗ್ ಕೋಚ್: ಅರವಿಂದ್, ಫೀಲ್ಡಿಂಗ್ ಕೋಚ್: ಶಬರೀಷ್ ಪಿ ಮೋಹನ್,