ಕ್ರೀಡೆ

ಭಾರತ ಟೆಸ್ಟ್ ತಂಡಕ್ಕೆ ಕನ್ನಡಿಗ ಪ್ರಸಿದ್ಧಕೃಷ್ಣ ಸೇರ್ಪಡೆ

ಲಂಡನ್: ಮೀಸಲು ಆಟಗಾರರಾಗಿ ಕಳೆದ 3 ತಿಂಗಳಿನಿಂದ ಭಾರತ ತಂಡದ ಜತೆಗಿರುವ ಕರ್ನಾಟಕದ ವೇಗಿ ಪ್ರಸಿದ್ಧಕೃಷ್ಣ ಪ್ರಧಾನ ಟೆಸ್ಟ್ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಕಾರ್ಯದೊತ್ತಡ ತಗ್ಗಿಸಲು ಬುಮ್ರಾ, ಶಮಿ ಅಥವಾ ಸಿರಾಜ್‌ಗೆ ವಿಶ್ರಾಂತಿ ನೀಡಿದರೆ ಓವಲ್ ಅಥವಾ ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಪ್ರಸಿದ್ಧಕೃಷ್ಣ ಆಡುವ ಬಳಗದಲ್ಲೂ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಟೀಮ್ ಮ್ಯಾನೇಜ್‌ಮೆಂಟ್ ಮನವಿಯನ್ವಯ ಆಯ್ಕೆ ಸಮಿತಿ 25 ವರ್ಷದ ಪ್ರಸಿದ್ಧ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿದೆ ಎಂದು ಬಿಸಿಸಿಐ ತಿಳಿಸಿದೆ.

ಇದುವರೆಗೆ 9 ಪ್ರಥಮ ದರ್ಜೆ ಪಂದ್ಯ ಆಡಿರುವ ಪ್ರಸಿದ್ಧಕೃಷ್ಣ, 34 ವಿಕೆಟ್ ಕಬಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ತವರಿನ ಏಕದಿನ ಸರಣಿಯಲ್ಲಿ 3 ಪಂದ್ಯ ಆಡಿ 6 ವಿಕೆಟ್ ಕಬಳಿಸಿ ಮಿಂಚಿದ್ದರು.