ಯುವ ಆಲ್ರೌಂಡರ್ ಮನ್ವಂತ್ ಕುಮಾರ್  
ಕ್ರೀಡೆ

ಜಯದ ಹಳಿಗೆ ಮರಳಿದ ಕರ್ನಾಟಕ:ಮನ್ವಂತ್‌ಗೆ ಐದು ವಿಕೆಟ್ ಗೊಂಚಲು

ಯುವ ಆಲ್ರೌಂಡರ್ ಮನ್ವಂತ್ ಕುಮಾರ್ (25ಕ್ಕೆ 5) ಐದು ವಿಕೆಟ್ ಗೊಂಚಲು ಹಾಗೂ ಅನುಭವಿ ಕರುಣ್ ನಾಯರ್ (61* ರನ್, 35 ಎಸೆತ, 6 ಬೌಂಡರಿ, 2 ಸಿಕ್ಸರ್) ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ದೇಶೀಯ ಟಿ20 ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಜೋರಾಂ ಎದುರು 7 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿತು. ಇದರೊಂದಿಗೆ ಆರ್.ಸ್ಮರಣ್ ಬಳಗ ಜಯದ ಹಳಿಗೆ ಮರಳಿತು.

ಮುಂಬೈ: ಯುವ ಆಲ್ರೌಂಡರ್ ಮನ್ವಂತ್ ಕುಮಾರ್ (25ಕ್ಕೆ 5) ಐದು ವಿಕೆಟ್ ಗೊಂಚಲು ಹಾಗೂ ಅನುಭವಿ ಕರುಣ್ ನಾಯರ್ (61* ರನ್, 35 ಎಸೆತ, 6 ಬೌಂಡರಿ, 2 ಸಿಕ್ಸರ್) ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ದೇಶೀಯ ಟಿ20 ಟೂರ್ನಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಜೋರಾಂ ಎದುರು 7 ವಿಕೆಟ್‌ಗಳಿಂದ ಸುಲಭ ಗೆಲುವು ದಾಖಲಿಸಿತು. ಇದರೊಂದಿಗೆ ಆರ್.ಸ್ಮರಣ್ ಬಳಗ ಜಯದ ಹಳಿಗೆ ಮರಳಿತು.

ವಾಂಖೆಡೆ ಸ್ಟೇಡಿಯಂನಲ್ಲಿ ಬುಧವಾರ ನಡೆದ ಎಲೀಟ್ ಎ ಗುಂಪಿನ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮನ್ವಂತ್ ಕುಮಾರ್ ಸಹಿತ ರಾಜ್ಯದ ವೇಗಿಗಳ ದಾಳಿಗೆ ತತ್ತರಿಸಿ ಚಿನ್ಮಯ್ ಸುತರ್ (71 ರನ್, 51 ಎಸೆತ, 6 ಬೌಂಡರಿ, 3 ಸಿಕ್ಸರ್) ಆಸರೆಯಲ್ಲಿ ಮಿಜೋರಾಂ ತಂಡ 7 ವಿಕೆಟ್‌ಗೆ 129 ರನ್‌ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಕರ್ನಾಟಕ ಚೇಸಿಂಗ್‌ನಲ್ಲಿ ಲವನೀತ್ ಸಿಸೋಡಿಯಾ (2) ವಿಕೆಟ್ ಬೇಗನೆ ಕಳೆದುಕೊಂಡರೂ, ರೋಹನ್ ಪಾಟೀಲ್ (35) ಹಾಗೂ ಕರುಣ್ ನಾಯರ್ ಜತೆಯಾಟದಿಂದ ಚೇತರಿಸಿಕೊಂಡಿತು. ಅಂತಿಮವಾಗಿ 13.5 ಓವರ್‌ಗಳಲ್ಲಿ 7 ವಿಕೆಟ್‌ಗೆ 130 ರನ್‌ಗಳಿಸಿದ ಕರ್ನಾಟಕ 37 ಎಸೆತ ಬಾಕಿಯಿರುವಂತೆಯೇ ಸುಲಭ ಗೆಲುವು ಒಲಿಸಿಕೊಂಡಿತು.

ಮಿಜೋರಾಂ: 7 ವಿಕೆಟ್‌ಗೆ 129 (ಲಾಲ್‌ಹ್ರುಯಿಜೆಲಾ 1, ಚಿನ್ಮಯ್ ಸುತರ್ 71, ಮನೇಂದರ್ 28, ಜೋಸೆಫ್​ 6, ಮನ್ವಂತ್ 25ಕ್ಕೆ 5, ಅಭಿಲಾಷ್ 19ಕ್ಕೆ 2, ವೈಶಾಖ್ 17ಕ್ಕೆ 1). ಕರ್ನಾಟಕ: 13.5 ಓವರ್‌ಗಳಲ್ಲಿ 7 ವಿಕೆಟ್‌ಗೆ 130 (ಲವನೀತ್ 2, ರೋಹನ್ ಪಾಟೀಲ್ 35, ಕರುಣ್ ನಾಯರ್ 61*, ಆರ್. ಸ್ಮರಣ್ 10, ಮನ್ವಂತ್ 12*, ಲಾಲಾತ್ಲನಮ್ಮಾ 20ಕ್ಕೆ 1). ಪಂದ್ಯಶ್ರೇಷ್ಠ: ಮನ್ವಂತ್ ಕುಮಾರ್.

ಕರ್ನಾಟಕಕ್ಕೆ ಮುಂದಿನ ಪಂದ್ಯ

ಎದುರಾಳಿ: ಜಾರ್ಖಂಡ್

ಯಾವಾಗ: ಶುಕ್ರವಾರ

ಆರಂಭ: ಬೆಳಗ್ಗೆ 11.00