ಬೆಂಗಳೂರು: ಕರ್ನಾಟಕ ಅಂಧರ ಕ್ರಿಕೆಟ್ ಸಂಸ್ಥೆ (ಕೆಸಿಎಬಿ) ಮತ್ತು ಸಮರ್ಥನಂ ಅಂಗವಿಕಲರ ಸಂಸ್ಥೆ ಕರ್ನಾಟಕ ಪುರುಷರ ಅಂಧರ ಕ್ರಿಕೆಟ್ ತಂಡಕ್ಕೆ ಜವರೇಗೌಡ ಅವರನ್ನು ನಾಯಕ ಮತ್ತು ಪ್ರಕಾಶ್ ಜಯರಾಮಯ್ಯ ಅವರನ್ನು ಉಪನಾಯಕರನ್ನಾಗಿ ನೇಮಿಸಿದೆ.
ಡಿಸೆಂಬರ್ 4ರಿಂದ 8ರವರೆಗೆ ಕರ್ನಾಟಕ ಅಂಧರ ಕ್ರಿಕೆಟ್ ತಂಡದ ಬಿ ಗುಂಪಿನ ಲೀಗ್ ಪಂದ್ಯಗಳನ್ನು ಡೆಹ್ರಾಡೂನ್ನಲ್ಲಿ ಆಡಲಿದೆ. ಕರ್ನಾಟಕ ತಂಡ ಮಹಾರಾಷ್ಟ್ರ, ಪಾಂಡಿಚೇರಿ, ದೆಹಲಿ ಮತ್ತು ಉತ್ತರಾಖಂಡ ವಿರುದ್ಧ ಒಟ್ಟು 4 ಲೀಗ್ ಪಂದ್ಯಗಳನ್ನು ಆಡಲಿದೆ. ಗುಂಪಿನ ಅಗ್ರ 2 ತಂಡಗಳು ಮುಂದಿನ ಸುತ್ತಿಗೆ ತೆರಳಲಿವೆ.
2023-24ರ ಇಂಡಸ್‌ಇಂಡ್ ಬ್ಯಾಂಕ್ ನಾಗೇಶ್ ಟ್ರೋಫಿ ಪುರುಷರ ರಾಷ್ಟ್ರೀಯ ಟಿ20 ಕ್ರಿಕೆಟ್‌ಗಾಗಿ ಕರ್ನಾಟಕ ಪುರುಷರ ತಂಡ:
ಬಿ1 ವರ್ಗದ ಆಟಗಾರರು (ಸಂಪೂರ್ಣ ಅಂಧರು)
1. ಶರತ್ ಬಿ ಎನ್ - ಬೆಂಗಳೂರು ಗ್ರಾಮಾಂತರ
2. ಗುಡದಪ್ಪ ಅರಿಕೆರೆ - ಕೊಪ್ಪಳ
3. ಬಸವರಾಜ ಎಂ ಹುಲ್ಲೇನವರ್ - ಬೆಳಗಾವಿ
4. ಕೃಷ್ಣಮೂರ್ತಿ - ಚಿತ್ರದುರ್ಗ
5. ಶ್ರೀನಾಥ್ - ಬೆಂಗಳೂರು ಗ್ರಾಮಾಂತರ
ಬಿ2 ವರ್ಗದ ಆಟಗಾರರು (2 ಮೀಟರ್‌ವರೆಗೆ ನೋಡಬಹುದಾದ ಆಟಗಾರರು)
6. ಲೋಕೇಶ - ಕೊಪ್ಪಳ
7. ಜವರೇಗೌಡ ಬಿ (ನಾಯಕ) - ರಾಮನಗರ
8. ಭಾಸ್ಕರ್ ಕೆ - ಬೆಂಗಳೂರು ಗ್ರಾಮಾಂತರ
9. ಅಭಿ ಎ ಎಸ್ - ಮೈಸೂರು
ಬಿ3 ವರ್ಗದ ಆಟಗಾರರು (6 ಮೀಟರ್‌ವರೆಗೆ ನೋಡಬಹುದಾದ ಆಟಗಾರರು)
10.ಪ್ರಕಾಶ ಜಯರಾಮಯ್ಯ (ಉಪನಾಯಕ) - ರಾಮನಗರ
11. ಸುನಿಲ್ ಆರ್ - ಚಿಕ್ಕಮಗಳೂರು
12. ಸಾಯಿ ಕೃಷ್ಣ ಎಂ - ಬೆಂಗಳೂರು ನಗರ
13. ಹುಸೇನ್ - ಕೊಪ್ಪಳ
14. ತಾಯಪ್ಪ - ಬೆಂಗಳೂರು ನಗರ
ಕೋಚ್: ಆಸಿಫ್ ಬಾಷಾ ಎಸ್
ಮ್ಯಾನೇಜರ್: ಚಂದ್ರಕಾಂತ