ಬೆಂಗಳೂರು: ಕರ್ನಾಟಕದ ಬ್ಯಾಟರ್ ಮನೀಷ್ ಪಾಂಡೆ ಮತ್ತು ನಟಿ&ರೂಪದರ್ಶಿ ಆಶ್ರಿತಾ ಶೆಟ್ಟಿ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಐಪಿಎಲ್ ಟ್ರೋಫಿ ಗೆದ್ದ ಕೆಕೆಆರ್ ತಂಡದ ಭಾಗವಾಗಿದ್ದ 34 ವರ್ಷದ ಮನೀಷ್ ಪಾಂಡೆ ಮತ್ತು ಆಶ್ರಿತಾ ಶೆಟ್ಟಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದ ತಮ್ಮ ಮದುವೆಯ ಚಿತ್ರಗಳನ್ನು ಡಿಲೀಟ್ ಮಾಡಿದ್ದಾರೆ. ಅಲ್ಲದೆ ಇಬ್ಬರ ಖಾತೆಯಲ್ಲೂ ಇಬ್ಬರೂ ಜತೆಗಿರುವ ಎಲ್ಲ ಚಿತ್ರಗಳನ್ನು ಡಿಲೀಟ್ ಮಾಡಿದ್ದಾರೆ. ಪರಸ್ಪರರನ್ನು ಅನ್ಾಲೋ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಮನೀಷ್&ಆಶ್ರಿತಾ 2019ರಲ್ಲಿ ಮುಂಬೈನಲ್ಲಿ ವಿವಾಹವಾಗಿದ್ದರು.
ಕಳೆದ ಐಪಿಎಲ್ ವೇಳೆ ಮನೀಷ್ ಜತೆಗೆ ಆಶ್ರಿತಾ ಕಾಣಿಸಿಕೊಂಡಿರಲಿಲ್ಲ. ಇದರಿಂದ ಇಬ್ಬರೂ ಕಳೆದ ಕೆಲ ತಿಂಗಳುಗಳಿಂದಲೇ ಪರಸ್ಪರ ದೂರವಾಗಿ ಬದುಕುತ್ತಿದ್ದಾರೆ ಎನ್ನಲಾಗಿದೆ. ಮನೀಷ್ ಪಾಂಡೆ ಭಾರತ ಪರ 29 ಏಕದಿನ, 39 ಟಿ20 ಪಂದ್ಯಗಳನ್ನು ಆಡಿದ್ದಾರೆ. ಮಂಗಳೂರು ಮೂಲದ ಆಶ್ರಿತಾ ಮುಂಬೈ ನಿವಾಸಿಯಾಗಿದ್ದು, ಕೆಲ ತುಳು ಸಿನಿಮಾಗಳಲ್ಲೂ ನಟಿಸಿದ್ದಾರೆ.