ಶಶಾಂಕ್ ಪಾಟೀಲ್​, ಪ್ರಿಯಾಂಕಾ ಮಡಿವಾಳಪ್ಪ ಏಜೆನ್ಸಿ
ಕ್ರೀಡೆ

ಕಿರಿಯರ ಅಥ್ಲೆಟಿಕ್ಸ್​ನಲ್ಲಿ ಕರ್ನಾಟಕದ ಶಶಾಂಕ್​, ಪ್ರಿಯಾಂಕಾಗೆ ಚಿನ್ನದ ಪದಕ

ರಾಜ್ಯಕ್ಕೆ ಕೊನೇ ದಿನ 2 ಬೆಳ್ಳಿ ಮತ್ತು 1 ಕಂಚಿನ ಪದಕವೂ ಒಲಿಯಿತು.

ಬೆಂಗಳೂರು: ಕರ್ನಾಟಕದ ಯುವ ಅಥ್ಲೀಟ್​ಗಳಾದ ಶಶಾಂಕ್​ ಪಾಟೀಲ್​ ಮತ್ತು ಪ್ರಿಯಾಂಕಾ ಮಡಿವಾಳಪ್ಪ ಜೈಪುರದಲ್ಲಿ ಭಾನುವಾರ ಮುಕ್ತಾಯಗೊಂಡ 23 ವಯೋಮಿತಿಯ 6ನೇ ಇಂಡಿಯನ್​ ಓಪನ್​ ಅಥ್ಲೆಟಿಕ್ಸ್​ ಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಜತೆಗೆ ರಾಜ್ಯಕ್ಕೆ ಕೊನೇ ದಿನ 2 ಬೆಳ್ಳಿ ಮತ್ತು 1 ಕಂಚಿನ ಪದಕವೂ ಒಲಿಯಿತು.

ಬೆಳಗಾವಿಯ ಶಶಾಂಕ್​ ಪಾಟೀಲ್​ ಪುರುಷರ ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ 76.16 ಮೀ. ಎಸೆತದೊಂದಿಗೆ ಸ್ವರ್ಣ ಜಯಿಸಿದರು. ಪ್ರಿಯಾಂಕಾ ಮಡಿವಾಳಪ್ಪ ಮಹಿಳೆಯರ 400 ಮೀ. ಹರ್ಡಲ್ಸ್​ನಲ್ಲಿ 1 ನಿಮಿಷ, 0.25 ಸೆಕೆಂಡ್​ಗಳಲ್ಲಿ ಸ್ಪರ್ಧೆ ಮುಗಿಸಿ ಚಿನ್ನ ಗೆದ್ದರೆ, ಇದೇ ಸ್ಪರ್ಧೆಯಲ್ಲಿ ರಾಜ್ಯದ ಮತ್ತೋರ್ವ ಅಥ್ಲೀಟ್​ ಅಪೂರ್ವ ಆನಂದ್​ ನಾಯ್ಕ್​ (1 ನಿ, 0.92 ಸೆ) ಕಂಚು ಜಯಿಸಿದರು.

ರಜತ ಪದಕ ಗೆದ್ದ ಪ್ರಜ್ವಲ್​

ಬೆಂಗಳೂರಿನ ವರ್ಷಿತಾ ಸಿ. ಮಹಿಳೆಯರ ಟ್ರಿಪಲ್​ ಜಂಪ್​ನಲ್ಲಿ 12.50 ಮೀ. ಜಿಗಿದು ರಜತ ಪದಕಕ್ಕೆ ಕೊರಳೊಡ್ಡಿದರು. ಜೆಎಸ್​ಡಬ್ಲ್ಯು ತಂಡವನ್ನು ಪ್ರತಿನಿಧಿಸಿದ ಕೊಡಗಿನ ಆರ್ಯನ್​ ಪ್ರಜ್ವಲ್​ ಕಶ್ಯಪ್​ ಪುರುಷರ 400 ಮೀ. ಹರ್ಡಲ್ಸ್​ನಲ್ಲಿ 50.28 ಸೆಕೆಂಡ್​ಗಳಲ್ಲಿ ಓಡಿ ರಜತ ಪದಕ ಗೆದ್ದರು.