ಅಹಮದಾಬಾದ್: ಪಂಜಾಬ್ ಬೌಲರ್‌ಗಳ ಅಬ್ಬರದ ಎದುರು ಸಂಪೂರ್ಣ ಮಂಕಾದ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಸೋಲು ಕಂಡಿತು. ಹ್ಯಾಟ್ರಿಕ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಕರ್ನಾಟಕ ತಂಡ ನಿರಾಸೆ ಅನುಭವಿಸಿತು. ಬೆಂಗಳೂರು ಹೊರವಲಯ ಆಲೂರಿನಲ್ಲಿ ನಡೆದ ಲೀಗ್ ಹಂತದಲ್ಲೂ ಪಂಜಾಬ್ ತಂಡಕ್ಕೆ ಶರಣಾಗಿದ್ದ ಕರ್ನಾಟಕ ತಂಡ ಇದೀಗ ಎಂಟರಘಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ಸಿಕ್ಕ ಅವಕಾಶವನ್ನು ಕೈಚೆಲ್ಲಿತು.
ಇದನ್ನೂ ಓದಿ: ದೇವರಾದ ಪುನೀತ್
ಸರ್ದಾರ್ ಪಟೇಲ್ ಮೊಟೆರಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋಲು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ, 17.2 ಓವರ್‌ಗಳಲ್ಲಿ 87 ರನ್‌ಗಳಿಗೆ ಸರ್ವಪತನ ಕಂಡಿತು. ಈ ಸುಲಭ ಗುರಿ ಬೆನ್ನಟ್ಟಿದ ಪಂಜಾಬ್ ತಂಡ ಪ್ರಭ್‌ಸಿಮ್ರಾನ್ ಸಿಂಗ್ (49*ರನ್, 37 ಎಸೆತ, 2 ಬೌಂಡರಿ, 3 ಸಿಕ್ಸರ್) ಹಾಗೂ ನಾಯಕ ಮಂದೀಪ್ ಸಿಂಗ್ (35*ರನ್, 33 ಎಸೆತ, 4 ಬೌಂಡರಿ, 1 ಸಿಕ್ಸರ್) ಜೋಡಿ ಬಿರುಸಿನ ಬ್ಯಾಟಿಂಗ್ ಲವಾಗಿ 12.4 ಓವರ್‌ಗಳಲ್ಲಿ 1 ವಿಕೆಟ್‌ಗೆ 89 ರನ್‌ಗಳಿಸಿ ಗೆಲುವಿನ ನಗೆ ಬೀರಿತು.
ಕರ್ನಾಟಕ: 17.2 ಓವರ್‌ಗಳಲ್ಲಿ 87 (ದೇವದತ್ ಪಡಿಕಲ್ 11, ಕರುಣ್ ನಾಯರ್ 12, ಅನಿರುದ್ಧ್ ಜೋಶಿ 27, ಶ್ರೇಯಸ್ ಗೋಪಾಲ್ 13, ಸಂದೀಪ್ ಶರ್ಮ 17ಕ್ಕೆ 2, ಅರ್ಷ್‌ದೀಪ್ ಸಿಂಗ್ 16ಕ್ಕೆ 2, ಸಿದ್ದಾರ್ಥ್ ಕೌಲ್ 15ಕ್ಕೆ 3, ರಮಣದೀಪ್ ಸಿಂಗ್ 22ಕ್ಕೆ 2, ಮಯಾಂಕ್ ಮಾರ್ಕಂಡೆ 12ಕ್ಕೆ 1), ಪಂಜಾಬ್: 12.4 ಓವರ್‌ಗಳಲ್ಲಿ 1 ವಿಕೆಟ್‌ಗೆ 89 (ಪ್ರಭ್‌ಸಿಮ್ರಾನ್ ಸಿಂಗ್ 49*, ಮಂದೀಪ್ ಸಿಂಗ್ 35*, ಮಿಥುನ್ 11ಕ್ಕೆ 1).