ಕ್ರೀಡೆ

ಕಾನ್ಪುರದಲ್ಲಿ ಮಳೆ ನಿಂತರೂ, ಮೂರನೇ ದಿನದಾಟ ರದ್ದು

ಕಾನ್ಪುರ: ಭಾರತ ಹಾಗೂ ಪ್ರವಾಸಿ ಬಾಂಗ್ಲಾದೇಶ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್‌ನ ಮೂರನೇ ದಿನದಾಟವೂ ಒಂದೂ ಎಸೆತವಿಲ್ಲದೆ ರದ್ದುಗೊಂಡಿದೆ. ಮಳೆ ಬಾರದಿದ್ದರೂ, ಒದ್ದೆಯಾದ ಔಟ್‌ಫೀಲ್ಡ್‌ನಿಂದಾಗಿ ಸತತ ಎರಡನೇ ದಿನವೂ ಆಟ ನಡೆಯಲಿಲ್ಲ. ಇದರಿಂದ ಪಂದ್ಯ ಬಹುತೇಕ ಡ್ರಾದತ್ತ ಸಾಗಿದೆ.

ಶನಿವಾರ ರಾತ್ರಿ ಸುರಿದ ನಿರಂತರ ಮಳೆಯಿಂದಾಗಿ ಗ್ರೀನ್ ಪಾರ್ಕ್ ಕ್ರೀಡಾಂಗಣ ಸಂಪೂರ್ಣವಾಗಿ ಒದ್ದೆಯಾಗಿದ್ದು, ಭಾನುವಾರ ಬೆಳಗ್ಗೆ ಸೂರ್ಯನ ಪ್ರಕಾಶಮಾನ ಬೆಳಕಿನ ನಡುವೆಯೂ ಆಟ ಆರಂಭಿಸಲು ಸಾಧ್ಯವಾಗಲಿಲ್ಲ. ಮೈದಾನದ ಕೆಲ ಭಾಗ ನೀರಿನಿಂದ ಕೂಡಿದ್ದರಿಂದ ದಿನದ ಆಟ ವಿಳಂಬಗೊಂಡಿತು. ಆದರೆ ಮಧ್ಯಾಹ್ನ 2 ಗಂಟೆಯವರೆಗೂ ಎರಡು ಬಾರಿ ಔಟ್‌ಫೀಲ್ಡ್ ಪರೀಕ್ಷಿಸಿದ ಅಂಪೈರ್‌ಗಳು ನಂತರ ದಿನದ ಆಟವನ್ನು ರದ್ದುಗೊಳಿಸಿರುವುದಾಗಿ ೋಷಿಸಿದರು. ಸತತ ಎರಡು ದಿನವೂ ಆಟ ಆರಂಭಿಸಲು ವಿಲವಾದ ಬೆನ್ನಲ್ಲೆ ಮೈದಾನದಲ್ಲಿನ ಒಳಚಂರಡಿ ಹಾಗೂ ಮೂಲ ಸೌಕರ್ಯಗಳ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಎರಡು ದಿನದ ಆಟ ಬಾಕಿಯಿದ್ದು, ಪಂದ್ಯದ ಬಹುತೇಕ ಡ್ರಾಗೊಳ್ಳುವ ಸಾಧ್ಯತೆಗಳಿವೆ. ಮೊದಲ ದಿನದ 35 ಓವರ್‌ಗಳ ಆಟದಲ್ಲಿ ಬಾಂಗ್ಲಾದೇಶ 3 ವಿಕೆಟ್‌ಗೆ 107 ರನ್‌ಗಳಿಸಿದೆ. ಎರಡು ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮ ಪಡೆ 1-0 ರಿಂದ ಮುನ್ನಡೆ ಸಾಧಿಸಿದ್ದು, ಪಂದ್ಯ ಡ್ರಾಗೊಂಡರೂ ತವರಿನಲ್ಲಿ ಸತತ 18ನೇ ಸರಣಿ ಜಯಿಸಲಿದೆ. ಅಕ್ಟೋಬರ್ 6ರಂದು ಬಾಂಗ್ಲಾದೇಶ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.