ನವದೆಹಲಿ: ಭಾರತ ಕಬಡ್ಡಿ ತಂಡದ ಆಟಗಾರ ಪವನ್ ಸೆಹ್ರಾವತ್, ಹಿಮಾನಿ ಜತೆಗೆ ಮಂಗಳವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಉತ್ತರಾಖಂಡದಲ್ಲಿ ವಿವಾಹ ಸಮಾರಂಭ ನಡೆಯಿತು.
30 ವರ್ಷದ ಪವನ್ ಸೆಹ್ರಾವತ್, ಹಾಲಿ ವರ್ಷದ ಏಷ್ಯನ್ ಗೇಮ್ಸ್ನಲ್ಲಿ ಸ್ವರ್ಣ ಪದಕ ಗೆದ್ದ ಭಾರತ ಕಬಡ್ಡಿ ತಂಡದ ಭಾಗವಾಗಿದ್ದರು. ಅವರು ಪ್ರೊ ಕಬಡ್ಡಿ ಲೀಗ್ನಲ್ಲಿ ಬೆಂಗಳೂರು ಬುಲ್ಸ್, ಗುಜರಾತ್ ಜೈಂಟ್ಸ್, ತಮಿಳ್ ತಲೈವಾಸ್ ಮತ್ತು ತೆಲುಗು ಟೈಟಾನ್ಸ್ ತಂಡಗಳ ಪರ ಆಡಿದ್ದಾರೆ.