ಕೆಸ್ಟ್ಚರ್ಚ್: ಭರ್ಜರಿ ಫಾರ್ಮ್ ಮುಂದುವರಿಸಿರುವ ಕನ್ನಡಿಗ ದೇವದತ್ ಪಡಿಕ್ಕಲ್ (80 ರನ್, 140 ಎಸೆತ, 12 ಬೌಂಡರಿ) ಮತ್ತು ಶತಕದಂಚಿನಲ್ಲಿರುವ ನಾಯಕ ಧ್ರುವ ಜುರೆಲ್ (99*ರನ್, 155 ಎಸೆತ, 11 ಬೌಂಡರಿ, 3 ಸಿಕ್ಸರ್) ಆಸರೆಯಲ್ಲಿ ಭಾರತ ಎ ತಂಡ ಎರಡನೇ ಚತುರ್ದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ಎ ಎದುರು ಉತ್ತಮ ಮೊತ್ತದತ್ತ ಮುನ್ನಡೆದಿದೆ.
ಹ್ಯಾಗ್ಲೆ ಓವಲ್ ಮೈದಾನದಲ್ಲಿ ಶನಿವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ಎ ತಂಡ ಮೊದಲ ಓವರ್ನಲ್ಲೇ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ (0) ವಿಕೆಟ್ ಕಳೆದುಕೊಂಡಿತು. ನಂತರ ಪಡಿಕ್ಕಲ್, ಜುರೆಲ್ ಸಹಿತ ಬ್ಯಾಟರ್ಗಳ ಉಪಯುಕ್ತ ಕೊಡುಗೆಯಿಂದ ದಿನದಂತ್ಯಕ್ಕೆ 88 ಓವರ್ಗಳಲ್ಲಿ 7 ವಿಕೆಟ್ಗೆ 291 ರನ್ ಕಲೆಹಾಕಿದೆ. ಶತಕದಿಂದ ಕೇವಲ 1 ರನ್ ದೂರವಿರುವ ಜುರೆಲ್ ಜತೆಗೆ ಆಕಾಶ್ದೀಪ್ (25*) ಕ್ರೀಸ್ನಲ್ಲಿದ್ದಾರೆ. ಇವರಿಬ್ಬರು ಮುರಿಯದ 8ನೇ ವಿಕೆಟ್ಗೆ 112 ಎಸೆತಗಳಲ್ಲಿ 69 ರನ್ ಕಲೆಹಾಕಿದ್ದಾರೆ.
ಇದಕ್ಕೆ ಮುನ್ನ ಪಡಿಕ್ಕಲ್ 2ನೇ ವಿಕೆಟ್ಗೆ ಸಾಯಿ ಸುದರ್ಶನ್ (41) ಜತೆ 160 ಎಸೆತಗಳಲ್ಲಿ 91 ರನ್ ಕಲೆಹಾಕಿ ಭಾರತ ಎ ತಂಡಕ್ಕೆ ಆರಂಭಿಕ ಆಘಾತದಿಂದ ಚೇತರಿಕೆ ನೀಡಿದರು. 3ನೇ ವಿಕೆಟ್ಗೆ ಯಶ್ ರಾಥೋಡ್ (13) ಜತೆ ಮತ್ತೆ 40 ರನ್ ಸೇರಿಸಿದರು. ಆದರೆ ಪ್ರವಾಸದ ಸತತ 2ನೇ ಶತಕದ ನಿರೀಕ್ಷೆಯಲ್ಲಿದ್ದಾಗ ಪಡಿಕ್ಕಲ್, ವೇಗಿ ್ರೆಸರ್ ಶೀಟ್ ಎಸೆತದಲ್ಲಿ ಬೌಲ್ಡಾದರು. ನಂತರ ಮತ್ತೋರ್ವ ಕನ್ನಡಿಗ ಆರ್. ಸ್ಮರಣ್ ಸ್ಟ್ ಬಾಲ್ ಡಕೌಟ್ ಆಗಿ ನಿರಾಸೆ ಮೂಡಿಸಿದರು. ಧ್ರುವ ಜುರೆಲ್ ಬಳಿಕ ಮಾನವ್ ಸುಥಾರ್ (22) ಮತ್ತು ಆಕಾಶ್ ದೀಪ್ ಬೆಂಬಲದೊಂದಿಗೆ ತಂಡದ ಮೊತ್ತವನ್ನು 300ರ ಸನಿಹ ಕೊಂಡೊಯ್ದರು.
ಭಾರತ ಎ: 88 ಓವರ್ಗಳಲ್ಲಿ 7 ವಿಕೆಟ್ಗೆ 291 (ಜೈಸ್ವಾಲ್ 0, ಸಾಯಿ ಸುದರ್ಶನ್ 41, ಪಡಿಕ್ಕಲ್ 80, ಯಶ್ ರಾಥೋಡ್ 13, ಧ್ರುವ ಜುರೆಲ್ 99*, ಆರ್. ಸ್ಮರಣ್ 0, ವಾಷಿಂಗ್ಟನ್ 8, ಮಾನವ್ ಸುಥಾರ್ 22, ಆಕಾಶ್ದೀಪ್ 25*, ್ರೆಸರ್ ಶೀಟ್ 50ಕ್ಕೆ 4, ರಾಂಡೆಲ್ 43ಕ್ಕೆ 1, ಲೆನಾಕ್ಸ್ 33ಕ್ಕೆ 1).
*9: ಯಶಸ್ವಿ ಜೈಸ್ವಾಲ್ ರೆಡ್ಬಾಲ್ ಕ್ರಿಕೆಟ್ನಲ್ಲಿ ಕಳೆದ 9 ಇನಿಂಗ್ಸ್ಗಳಲ್ಲಿ 4 ಬಾರಿ ಸೊನ್ನೆ ಸುತ್ತಿದ್ದಾರೆ.
*7: ದೇವದತ್ ಪಡಿಕ್ಕಲ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆಡಿರುವ ಕಳೆದ 7 ಇನಿಂಗ್ಸ್ಗಳಲ್ಲಿ 4 ಶತಕ, 1 ಅರ್ಧಶತಕ ಸಿಡಿಸಿದ್ದಾರೆ.