ಕ್ರೀಡೆ

ಜೂನಿಯರ್ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಭಾರತದ ಕಿರಿಯರಿಗೆ ಇಂದು ಸ್ಪೇನ್ ಸವಾಲು

ಕೌಲಾಲಂಪುರ: ಜೂನಿಯರ್ ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಗೆಲುವಿನ ಆರಂಭ ಕಂಡಿರುವ ಭಾರತ ತಂಡ ಗುರುವಾರ ತನ್ನ 2ನೇ ಲೀಗ್ ಪಂದ್ಯದಲ್ಲಿ ಬಲಿಷ್ಠ ಸ್ಪೇನ್ ತಂಡದ ಸವಾಲು ಎದುರಿಸಲಿದ್ದು, ಉತ್ತಮ್ ಸಿಂಗ್ ಬಳಗ ಜಯದ ಓಟ ಮುಂದುವರಿಸುವ ತವಕದಲ್ಲಿದೆ. ಉಪನಾಯಕ ಅರೈಜೀತ್ ಸಿಂಗ್ ಸಿಡಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದ ಶುಭಾರಂಭ ಕಂಡಿರುವ ಭಾರತ ಮೊದಲ ಪಂದ್ಯದಲ್ಲಿ ಆರು ಪೆನಾಲ್ಟಿ ಬಿಟ್ಟುಕೊಟ್ಟಿತು.

ಮೊದಲ ಪಂದ್ಯದ ಪ್ರದರ್ಶನ ತೃಪ್ತಿ ತಂದಿದ್ದು, ಮೂರು ಅಂಕ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. 2 ಪೆನಾಲ್ಟಿ ಅವಕಾಶಗಳಲ್ಲಿ ಗೋಲು ನೀಡಿರುವುದರಿಂದ ಸ್ಪೇನ್ ಎದುರು ಎಚ್ಚರಿಕೆ ಆಟ ಪ್ರದರ್ಶಿಸಬೇಕಿದೆ ಎಂದು ತಂಡದ ಕೋಚ್ ಕುಮಾರ್ ತಿಳಿಸಿದ್ದಾರೆ. 2005ರಲ್ಲಿ ಕಂಚಿನ ಪದಕ ಜಯಿಸಿದ್ದ ಸ್ಪೇನ್ ಗುಂಪಿನ ಕಠಿಣ ಎದುರಾಳಿ ಎನಿಸಿದೆ.

ನಾಯಕ ಉತ್ತಮ್ ಸಿಂಗ್ ಹಾಗೂ ಅರೈಜೀತ್ ಸಿಂಗ್ ಹೊರತುಪಡಿಸಿ ಇತರ ಆಟಗಾರರಿಗೆ ಅನುಭವದ ಕೊರತೆ ಇದೆ. ಪ್ರಸ್ತುತ ಾರ್ಮ್‌ನಲ್ಲಿ ಭಾರತವೇ ೇವರಿಟ್ ತಂಡ ಎನಿಸಿದೆ. ಗುಂಪಿನ ಅಗ್ರ ಎರಡು ತಂಡಗಳು ಕ್ವಾರ್ಟರ್‌ೈನಗೆ ಅರ್ಹತೆ ಪಡೆಯಲಿವೆ.

ಪಂದ್ಯ ಆರಂಭ: ಸಂಜೆ 5.30. ನೇರಪ್ರಸಾರ: ಸ್ಪೋರ್ಟ್ಸ್18