ಬೆಂಗಳೂರು: ಭಾರತದ ಪ್ರಮುಖ ಜೀವ ವಿಮಾ ಕಂಪನಿ ಪಿಎನ್‌ಬಿ ಮೆಟ್‌ಲೈಫ್, ಯುವ ಪ್ರತಿಭೆಗಳನ್ನು ಪೋಷಿಸಲು ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್(ಜೆಬಿಸಿ)ನ 7ನೇ ಆವೃತ್ತಿಯನ್ನು ೋಷಿಸಿದ್ದು, ಉದ್ಘಾಟನಾ ಸಮಾರಂಭ ಸೆಪ್ಟೆಂಬರ್ 15 ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಬೆಂಗಳೂರು ನಗರದಲ್ಲಿ ಅಕ್ಟೋಬರ್ 5 ರಿಂದ 9ರವರೆಗೆ ಟೂರ್ನಿ ನಡೆಯಲಿದೆ.
7 ಮತ್ತು 17 ವರ್ಷದೊಳಗಿನ ಬ್ಯಾಡ್ಮಿಂಟನ್ ಆಟಗಾರರು ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್(ಜೆಬಿಸಿ)ನ - 2023ರಲ್ಲಿ ಸ್ಪರ್ಧಿಸಲು ಅರ್ಹರಾಗಿದ್ದಾರೆ. 9 ವಯೋಮಿತಿ, 11ವಯೋಮಿತಿ, 13 ವಯೋಮಿತಿ, 15 ವಯೋಮಿತಿ ಮತ್ತು 17 ವಯೋಮಿತಿಯ ವಿವಿಧ ವಿಭಾಗಗಳಲ್ಲಿ ಸ್ಫರ್ಧೆ ನಡೆಯಲಿದೆ. ಪ್ರತಿಯೊಬ್ಬ ಆಟಗಾರ ಗರಿಷ್ಠ ವಯಸ್ಸಿನ ಮಿತಿಗೆ ಅನುಗುಣವಾಗಿ ಗರಿಷ್ಠ ಎರಡು ವಿಭಾಗಗಳಲ್ಲಿ ಆಡಬಹುದು. ದೆಹಲಿ, ಮುಂಬೈ, ಬೆಂಗಳೂರು, ಗುವಾಹಟಿ, ಕೊಚ್ಚಿ, ಜಲಂಧರ್, ಅಹಮದಾಬಾದ್, ಹೈದರಾಬಾದ್, ರಾಂಚಿ ಮತ್ತು ಲಖನೌ ಸೇರಿದಂತೆ 10 ನಗರಗಳಲ್ಲಿ ಚಾಂಪಿಯನ್‌ಷಿಪ್ ನಡೆಯಲಿವೆ.
ಪಿಎನ್‌ಬಿ ಮೆಟ್‌ಲೈಫ್‌ನ ಎಂಡಿ ಮತ್ತು ಸಿಇಒ ಆಶಿಶ್ ಶ್ರೀವಾಸ್ತವ ಮಾತನಾಡಿ, ಚಾಂಪಿಯನ್‌ಷಿಪ್ ಆಯೋಜನೆಗೆ ಉತ್ಸುಕರಾಗಿದ್ದು, ಆರು ಅಸಾಧಾರಣ ಆವೃತ್ತಿಗಳ ಅವಧಿಯಲ್ಲಿ, ಪಿಎನ್‌ಬಿ ಮೆಟ್‌ಲೈಫ್ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಉನ್ನತ ಯುವ ಕ್ರೀಡಾ ಪ್ರತಿಭೆಗಳನ್ನು ಭೌಗೋಳಿಕ ಗಡಿ ಮತ್ತು ಸಂಸ್ಕೃತಿಗಳನ್ನು ಮೀರಿ ಒಗ್ಗೂಡಿಸಿದೆ ಎಂದು ಹೇಳಿದರು.