ಕ್ರೀಡೆ

Taekwondo Championship: ಟೇಕ್ವಾಂಡೋದಲ್ಲಿ ಜೆಪಿಎಲ್ ಅಕಾಡೆಮಿ 10 ಪದಕ ಸಾಧನೆ

ಬೆಂಗಳೂರು: ಇತ್ತೀಚೆಗೆ ದಕ್ಷಿಣ ಕೊರಿಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಮುಕ್ತ ಟೇಕ್ವಾಂಡೋ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಂಜನಾಪುರದ ಜೆಪಿಎಲ್ ಟೇಕ್ವಾಂಡೋ ಅಕಾಡೆಮಿ ಪಟುಗಳು 1 ಚಿನ್ನ, 3 ಬೆಳ್ಳಿ ಹಾಗೂ 1 ಕಂಚು ಸಹಿತ ಒಟ್ಟು ಐದು ಪದಕ ಗೆದ್ದುಕೊಂಡಿದ್ದಾರೆ. ಪೋಮ್ಸ್ ಹಾಗೂ ಫೈಟಿಂಗ್‌ನಲ್ಲಿ ತೇಜಸ್ವಿನಿ ವಿಎನ್ 2 ರಜತ ಪದಕ ಜಯಿಸಿದರೆ, ಕಾಜಲ್ ಸಿಂಗ್ ಫೈಟಿಂಗ್ ವಿಭಾಗದಲ್ಲಿ ಚಿನ್ನ,ಪೋಮ್ಸ್‌ನಲ್ಲಿ ಕಂಚಿಗೆ ಕೊರಳೊಡ್ಡಿದರು. ಪೋಮ್ಸ್‌ನಲ್ಲಿ ನವನೀತ್ ಕಶ್ಯಪ್ ಬೆಳ್ಳಿ ಪದಕ ಜಯಿಸಿದ್ದಾರೆ.

ಇದರ ಜತೆಗೆ ಮಲೇಷ್ಯಾದಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲೂ ಭಾಗವಹಿಸಿದ್ದ ಅಕಾಡೆಮಿಯ ದೀಕ್ಷಿತ್ (1ಚಿನ್ನ, ಕಂಚು), ನಿಹಾಲ್ ಗಾಂಧಿ (ಕಂಚು) ಹಾಗೂ ತನುಜ್ (2 ಕಂಚು) ಒಟ್ಟು 5 ಪದಕ ತನ್ನದಾಗಿಸಿಕೊಂಡಿದ್ದಾರೆ.