ಕ್ರೀಡೆ

ಜಿಯೋ ಸಿನಿಮಾದಲ್ಲಿ ಸೌರಾಷ್ಟ್ರ ಪ್ರೀಮಿಯರ್ ಲೀಗ್ ನೇರಪ್ರಸಾರ: ಶೆಲ್ಡನ್ ಜಾಕ್ಸನ್, ಚೇತನ್ ಸಕಾರಿಯಾ ಕಣಕ್ಕೆ

ಮುಂಬೈ: ಭಾರತದ ಪ್ರಮುಖ ದೇಶೀಯ ಟಿ20 ಟೂರ್ನಿಗಲ್ಲಲಿ ಒಂದಾದ ಸೌರಾಷ್ಟ್ರ ಪ್ರೀಮಿಯರ್ ಲೀಗ್‌ನ ಮೂರನೇ ಆವೃತ್ತಿಯನ್ನು ಕ್ರಿಕೆಟ್ ಅಭಿಮಾನಿಗಳಿಗೆ ತಲುಪಿಸಲು ಜಿಯೋಸಿನಿಮಾ ಸಿದ್ಧವಾಗಿದೆ. ಆಗಸ್ಟ್ 23 ರಂದು ಆರಂಭವಾಗಲಿರುವ ಟೂರ್ನಿಯಲ್ಲಿ ಸೌರಾಷ್ಟ್ರದ ಅತ್ಯುತ್ತಮ ಪ್ರತಿಭೆಗಳು ಕಣಕ್ಕಿಳಿಯಲಿದ್ದು, ಇದರ ಪಂದ್ಯಗಳು ಜಿಯೋಸಿನಿಮಾದಲ್ಲಿ ನೇರಪ್ರಸಾರ ಕಾಣಲಿವೆ. ಟೂರ್ನಿಯಲ್ಲಿ ಐದು ತಂಡಗಳು ರೌಂಡ್-ರಾಬಿನ್ ಮಾದರಿಯಲ್ಲಿ ಎಂಟು ದಿನಗಳ ಕಾಲ ಹೋರಾಡಲಿವೆ. ಅಂತಿಮವಾಗಿ ಅಗ್ರ ಎರಡು ತಂಡಗಳು ಆಗಸ್ಟ್ 31ರಂದು ಸೌರಾಷ್ಟ್ರದ ಟಿ20 ಚಾಂಪಿಯನ್ ಪಟ್ಟ ಅಲಂಕರಿಸಲು ಫೈನಲ್‌ನಲ್ಲಿ ಪೈಪೋಟಿ ನಡೆಸಲಿವೆ.

ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಆಯೋಜಿಸಿರುವ, ಪ್ರತಿಷ್ಠಿತ ಮತ್ತು ಜನಪ್ರಿಯ ರಾಜ್ಯ ಮಟ್ಟದ ಟಿ20 ಟೂರ್ನಿಯು ಎಲ್ಲ ವೀಕ್ಷಕರಿಗೆ ಉಚಿತವಾಗಿ ಲಭ್ಯವಿರುತ್ತದೆ. ಪಂದ್ಯಗಳು ಪ್ರತಿದಿನ ರಾತ್ರಿ 7ಕ್ಕೆ ಪ್ರಾರಂಭವಾಗುತ್ತವೆ. ಆಗಸ್ಟ್ 25 ಮತ್ತು 26ರಂದು ಎರಡು ಪಂದ್ಯಗಳು (ಡಬಲ್ ಹೆಡರ್)ನಡೆಯಲಿದ್ದು, ದಿನದ ಮೊದಲ ಪಂದ್ಯ ಮಧ್ಯಾಹ್ನ 3ಕ್ಕೆ ಆರಂಭಗೊಳ್ಳಲಿದೆ.

2023ರ ಸೌರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಜಲವಾಡ್ ರಾಯಲ್ಸ್, ಕಚ್ ವಾರಿಯರ್ಸ, ಹಲಾರ್ ಹೀರೋಸ್, ಸೂರತ್ ಲಯನ್ಸ್ ಮತ್ತು ಗೋಹಿಲ್ವಾಡ್ ಗಾಲ್ಡಿಯೇಟರ್ಸ ತಂಡಗಳು ಆಡಲಿವೆ. ಕಳೆದ ವರ್ಷದ ಫೈನಲಿಸ್ಟ್ಗಳಾದ ಹಲಾರ್ ಹೀರೋಸ್ ಮತ್ತು ಗೋಹಿಲ್ವಾಡ್ ಗಾಲ್ಡಿಯೇಟರ್ಸ್ ನಡುವೆ ಈ ಆವೃತ್ತಿಯ ಮೊದಲ ಪಂದ್ಯ ನಡೆಯಲಿದೆ. 2022-23ರ ರಣಜಿ ಟ್ರೋಫಿ ವಿಜೇತ ಸೌರಾಷ್ಟ್ರ ತಂಡದ 17ರಲ್ಲಿ 16 ಆಟಗಾರರು ಈ ಟೂರ್ನಿಯಲ್ಲಿ ಮೈದಾನಕ್ಕಿಳಿಯಲಿದ್ದಾರೆ.

ಸೌರಾಷ್ಟ್ರ ಕ್ರಿಕೆಟ್ ಲೀಗ್ ಟೂರ್ನಿಯು ವಿಶ್ವದ ಅತ್ಯುತ್ತಮ ಕ್ರಿಕೆಟ್ ಟೂರ್ನಿ ಮತ್ತು ಪಂದ್ಯಗಳನ್ನು ಅಭಿಮಾನಿಗಳಿಗೆ ತಲುಪಿಸುವ ಜಿಯೋಸಿನಿಮಾದ ನೇರಪ್ರಸಾರದ ಪಟ್ಟಿಗೆ ಹೊಸ ಸೇರ್ಪಡೆಯಾಗಿದೆ. ಐಪಿಎಲ್, ಡಬ್ಲ್ಯುಪಿಎಲ್, ಎಸ್‌ಎ20, ಎಂಎಲ್ಸಿ, ಅಬುಧಾಬಿ ಟಿ10, ಜಿಮ್-ಆಫ್ರೋ ಟಿ10, ಭಾರತ ತಂಡದ ವೆಸ್ಟ್ ಇಂಡೀಸ್ ಪ್ರವಾಸ, ಇತ್ತೀಚೆಗೆ ಭಾರತ ತಂಡದ ಐರ್ಲೆಂಡ್ ಪ್ರವಾಸದ ದಾಖಲೆ ಮುರಿಯುವ ಪ್ರಸ್ತುತಿಗಳ ನಂತರ ಸೌರಾಷ್ಟ್ರ ಪ್ರೀಮಿಯರ್ ಲೀಗ್ ಅನ್ನೂ ನೇರಪ್ರಸಾರ ಮಾಡಲಾಗುತ್ತಿದೆ.

ವೀಕ್ಷಕರು ಜಿಯೋ ಸಿನಿಮಾ ಆ್ಯಪ್ (ಐಒಎಸ್ ಮತ್ತು ಆಂಡ್ರಾಯ್ಡ್) ಡೌನ್‌ಲೋಡ್ ಮಾಡಿಕೊಳ್ಳುವ ಮೂಲಕ ತಮ್ಮ ಆಯ್ಕೆಯ ಕ್ರೀಡೆಗಳನ್ನು ವೀಕ್ಷಿಸಬಹುದಾಗಿದೆ.