ಕ್ರೀಡೆ

ಕುತೂಹಲ ಕೆರಳಿಸಿದೆ ರಾಹುಲ್​ ದ್ರಾವಿಡ್​-ಜಯ್​ ಷಾ ನಡುವಿನ ರಹಸ್ಯ ಸಭೆ!

ನವದೆಹಲಿ: ಇತ್ತೀಚೆಗೆ ಭಾರತ ತಂಡ ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಸರಣಿಯ ಕೊನೇ 2 ಪಂದ್ಯಗಳನ್ನು ಆಡಲು ಅಮೆರಿಕದ ಮಿಯಾಮಿಗೆ ತೆರಳಿದಾಗ ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಮತ್ತು ಬಿಸಿಸಿಐ ಕಾರ್ಯದರ್ಶಿ ಜಯ್​ ಷಾ ನಡುವೆ 2 ಗಂಟೆಗಳ ಸುದೀರ್ ಸಭೆ ನಡೆದಿದೆ. ಜಯ್​ ಷಾ ತಂಗಿದ್ದ ಖಾಸಗಿ ಹೋಟೆಲ್​ನ ಕೊಠಡಿಯಲ್ಲಿ ಇವರಿಬ್ಬರ ನಡುವೆ ಚರ್ಚೆ ನಡೆದಿದೆ ಎನ್ನಲಾಗಿದೆ.

ಜಯ್​ ಷಾ ಮಿಯಾಮಿಗೆ ಖಾಸಗಿ ಭೇಟಿ ನೀಡಿದ್ದ ಕಾರಣ ಪ್ರತ್ಯೇಕ ಹೋಟೆಲ್​ನಲ್ಲಿ ಉಳಿದುಕೊಂಡಿದ್ದರು. ಆ ವೇಳೆ ದ್ರಾವಿಡ್​ ಭಾರತ ತಂಡದ ಹೋಟೆಲ್​ನಿಂದ ಕಾರಿನಲ್ಲಿ ಅಲ್ಲಿಗೆ ತೆರಳಿದ್ದರು ಎನ್ನಲಾಗಿದೆ.

ಮುಂಬರುವ ಏಷ್ಯಾಕಪ್​-ವಿಶ್ವಕಪ್​ ಹಿನ್ನೆಲೆಯಲ್ಲಿ ಇವರಿಬ್ಬರ ಈ ಭೇಟಿ ಮಹತ್ವ ಪಡೆದಿದೆ. ಅಲ್ಲದೆ ಏಕದಿನ ವಿಶ್ವಕಪ್​ ಬಳಿಕ ದ್ರಾವಿಡ್​ ಅವರ ಹಾಲಿ ಒಪ್ಪಂದ ಮುಕ್ತಾಯಗೊಳ್ಳಲಿದ್ದು, ಅವರ ಮರುನೇಮಕಕ್ಕೆ ಸಂಬಂಧಿಸಿದಂತೆಯೂ ಮಾತುಕತೆ ನಡೆದಿರಬಹುದು ಎನ್ನಲಾಗಿದೆ.