ಲಾಹೋರ್: ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ಗೆ ರಾಜಕೀಯ ಕ್ಷೇತ್ರದಲ್ಲಿ ಸವಾಲು ಹಾಕಲು ಸಿದ್ಧವಾಗುತ್ತಿದ್ದಾರೆ ದಿಗ್ಗಜ ಬ್ಯಾಟ್ಸ್ಮನ್. ಶೀಘ್ರವೇ ರಾಜಕೀಯ ಸೇರ್ಪಡೆಗೊಳ್ಳಲು ಅಣಿಯಾಗುತ್ತಿರುವ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಯೂಟ್ಯೂಟ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಕೇವಲ ಕ್ರಿಕೆಟ್ನಲ್ಲಷ್ಟೇ ಅಲ್ಲ, ರಾಜಕೀಯದಲ್ಲೂ ಇಮ್ರಾನ್ಗೆ ಸವಾಲು ಹಾಕುವೆ ಎಂದಿದ್ದಾರೆ. ನಾನು ರಾಜಕೀಯಕ್ಕೆ ಸೇರುವೆ, ನಂತರವಷ್ಟೇ ನಿಜವಾದ ರಾಜಕೀಯ ಏನು ಅಂತ ಗೊತ್ತಾಗಲಿದೆ ಎಂದಿದ್ದಾರೆ.
ಕೇವಲ ಕ್ರಿಕೆಟ್ನಲ್ಲಿ ನಾನು ಅವರಿಗೆ ನಾಯಕನಲ್ಲ, ರಾಜಕೀಯದಲ್ಲೂ ನಾಯಕನಾಗುವೆ. ನಾನು ಅವರಿಗೆ ನಾಯಕನಾಗಿದ್ದನ್ನು ಇಮ್ರಾನ್ ನೆನೆಪಿಸಿಕೊಳ್ಳಲಿ ಎಂದು ಮಿಯಾಂದಾದ್ ಹೇಳಿದ್ದಾರೆ. ಇಮ್ರಾನ್ ಖಾನ್ ಪ್ರಧಾನಿಯಾದ ಬಳಿಕ ಪಾಕ್ ಎಲ್ಲ ರಂಗದಲ್ಲಿ ವಿಫಲವಾಗಿದೆ. ಅವರೊಬ್ಬರ ವೈಫಲ್ಯ ನಾಯಕ. ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ (ಪಿಸಿಬಿ) ಸೂಕ್ತ ವ್ಯಕ್ತಿಯನ್ನು ನೇಮಿಸಬಹುದಿತ್ತು ಮಿಯಾಂದಾದ್ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: 55 ಲಕ್ಷ ರೂ. ವಿತ್ಡ್ರಾಯಲ್ ಬಿಟ್ಟರೆ, ರಿಯಾ ಅಥವಾ ಸಂಬಂಧಿಕರ ಖಾತೆಗೆ ದೊಡ್ಡ ಮೊತ್ತ ವರ್ಗಾವಣೆಗೊಂಡಿಲ್ಲ
63 ವರ್ಷದ ಮಿಯಾಂದಾದ್ ಪಾಕಿಸ್ತಾನ ತಂಡಕ್ಕೆ ನಾಯಕ, ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. 124 ಟೆಸ್ಟ್ ಪಂದ್ಯಗಳಿಂದ 23 ಶತಕ ಸೇರಿದಂತೆ 8832 ರನ್ ಪೇರಿಸಿದ್ದರೆ, 233 ಏಕದಿನ ಪಂದ್ಯಗಳಿಂದ 8 ಶತಕ ಒಳಗೊಂಡಂತೆ 7381 ರನ್ ಬಾರಿಸಿದ್ದಾರೆ.