ಕ್ರೀಡೆ

ಸಿಡ್ನಿ ಟೆಸ್ಟ್​ನಿಂದ Jasprit Bumrah ಔಟ್​? ಆತಂಕಕಾರಿ ದೃಶ್ಯ ವೈರಲ್​

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ತಂಡವು ದಿಟ್ಟ ಪ್ರತಿರೋಧ ತೋರಿದ್ದು, ಎದುರಾಳಿಗಳ ವಿರುದ್ಧ ಮೇಲುಗೈ ಸಾಧಿಸಿದ್ದು 181 ರನ್​ಗಳಿಗೆ ಆಲೌಟ್​ ಮಾಡಿದೆ. ಇನ್ನೂ ಪಂದ್ಯದ ವೇಳೆ ಟೀಮ್​ ಇಂಡಿಯಾ ನಾಯಕ ಜಸ್ಪ್ರೀತ್​ ಬುಮ್ರಾ (Jasprit Bumrah) ಗಾಯಗೊಂಡಿದ್ದು, 2ನೇ ದಿನದಾಟದ ಮಧ್ಯದಲ್ಲಿ ಮೈದಾನ ತೊರೆದಿದ್ದಾರೆ.  ಹಂಗಾಮಿ ನಾಯಕನಾಗಿ ವಿರಾಟ್ ಕೊಹ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎರಡನೇ ದಿನದಾಟದ ಭೋಜನಾ ವಿರಾಮಕ್ಕೂ ಮುನ್ನ ಗಾಯದಿಂದಾಗಿ ಹೊರನಡೆದ ಬುಮ್ರಾ (Jasprit Bumrah) ಆ ಬಳಿಕ ತಂಡ ಫಿಸಿಯೋರೊಂದಿಗೆ ಆಸ್ಪತ್ರೆಗೆ ತೆರಳಿದ್ದಾರೆ. ಬುಮ್ರಾ ಸ್ಕ್ಯಾನಿಂಗ್​ಗೆ ಒಳಪಟ್ಟಿದ್ದು, ಅಂತಿಮ ಟೆಸ್ಟ್​ ಪಂದ್ಯದಲ್ಲಿ ಆಡಲಿದ್ದಾರಾ ಅಥವಾ ಹೊರಬೀಳಲಿದ್ದಾರಾ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಹಂಗಾಮಿ ನಾಯಕರಾಗಿ ವಿರಾಟ್​ ಕೊಹ್ಲಿ ಕಾರ್ಯನಿರ್ವಹಿಸುತ್ತಿದ್ದು, ವರ್ಷಗಳ ಬಳಿಕ ಮತ್ತೊಮ್ಮೆ ಕ್ಯಾಪ್ಟನ್​ ಸ್ಥಾನವನ್ನು ಅಲಂಕರಿಸಿದ್ದಾರೆ.

ಇನ್ನೂ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಜಸ್ಪ್ರೀತ್​ ಬುಮ್ರಾ ಗಾಯಗೊಂಡಿದ್ದು, ಭಾರತಕ್ಕೆ ದೊಡ್ಡ ಹಿನ್ನಡೆ ಎಂದರೆ ತಪ್ಪಾಗಲಾರದು. ಹಾಲಿ ಸರಣಿಯಲ್ಲಿ 32 ವಿಕೆಟ್​ಗಳನ್ನು ಪಡೆದಿರುವ ಬುಮ್ರಾ ಅನುಪಸ್ಥಿತಿ ಆಸ್ಟ್ರೇಲಿಯಾಗೆ ಪ್ಲಸ್​ ಆಗಲಿದ್ದು, ಟೀಮ್ ಇಂಡಿಯಾ ಪಾಲಿಗೆ ಹಿನ್ನಡೆಯನ್ನುಂಟು ಮಾಡಲಿದೆ.

ಭಾರತ (Team India) ಹಾಗೂ ಆಸ್ಟ್ರೇಲಿಯಾ (Australia) ನಡುವಿನ 5 ಪಂದ್ಯಗಳ ಬಾರ್ಡರ್​-ಗವಾಸ್ಕರ್ (Border-Gavaskar)​ ಟೆಸ್ಟ್​ ಸರಣಿಯೂ ನವೆಂಬರ್​ 22, 2024ರಂದು ಆರಂಭವಾಗಿದ್ದು, ಜನವರಿ 7, 2025ರವರೆಗೆ ಆಯೋಜನೆಗೊಂಡಿದೆ. ಈ ಸರಣಿ ಆಡಲು ಭಾರತ ತಂಡವು ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡಲಿದೆ. ಬಾರ್ಡರ್- ಗವಾಸ್ಕರ್ ಟ್ರೋಫಿ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2023-2025 ಅಡಿಯಲ್ಲಿ ಆಡಲಾಗುತ್ತಿದೆ.