ಬೆಂಗಳೂರು: ಮೂರನೇ ಆವೃತ್ತಿಯ ಬೆಂಗಳೂರು ಓಪನ್ ಟೆನಿಸ್ ಚಾಲೆಂಜರ್ ಟೂರ್ನಿಯ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯ ಕೇವಲ 68 ನಿಮಿಷದ ಮುಖಾಮುಖಿಯಾಗಿದ್ದರೂ, ಫೈನಲ್ನಲ್ಲಿದ್ದ ಇಬ್ಬರೂ ಆಟಗಾರರು ಪೈಪೋಟಿಗೆ ಬಿದ್ದವರಂತೆ ಚಾಂಪಿಯನ್ ಪಟ್ಟಕ್ಕೆ ಹೋರಾಟ ನಡೆಸಿದರು. ಕೊನೆಗೆ ಆಸ್ಟ್ರೇಲಿಯಾದ 28 ವರ್ಷದ ಆಟಗಾರ ಜೇಮ್್ಸ ಡಕ್ವರ್ತ್ ಚೊಚ್ಚಲ ಬಾರಿಗೆ ಬೆಂಗಳೂರು ಓಪನ್ ಟೂರ್ನಿಯ ಚಾಂಪಿಯನ್ ಎನಿಸಿಕೊಂಡರು. ಬೆಂಗಳೂರಿನ ಎಟಿಪಿ ಚಾಲೆಂಜರ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಮೊದಲ ವಿದೇಶಿ ಆಟಗಾರ ಇವರಾಗಿದ್ದಾರೆ.
ಕೆಎಸ್ಎಲ್ಟಿಎ ಪ್ರಧಾನ ಕೋರ್ಟ್ನಲ್ಲಿ ಭಾನುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಹೋರಾಟದಲ್ಲಿ 4ನೇ ಶ್ರೇಯಾಂಕದ ಜೇಮ್್ಸ ಡಕ್ವರ್ತ್ 6-4, 6-4ರಿಂದ ಶ್ರೇಯಾಂಕರಹಿತ ಆಟಗಾರ ಬೆಂಜಮಿನ್ ಬೊಂಜಿಯನ್ನು ಸೋಲಿಸಿದರು. ಕಳೆದ ವರ್ಷ ಚಾಲೆಂಜರ್ ಕಣದಲ್ಲಿ ಸ್ಪರ್ಧಿಸಿದ್ದ 6 ಫೈನಲ್ಗಳ ಪೈಕಿ 4ರಲ್ಲಿ ಗೆಲುವು ಕಂಡಿದ್ದ ಡಕ್ವರ್ತ್ ತಮ್ಮ ಭರ್ಜರಿ ಫಾಮರ್್ಅನ್ನು ಬೆಂಗಳೂರಿನಲ್ಲೂ ಮುಂದುವರಿಸಿದರು.
ಉಭಯ ಆಟಗಾರರು ಸರ್ವ್ ಉಳಿಸಿಕೊಳ್ಳಲು ಪರದಾಟ ನಡೆಸಿದ ಮೊದಲ ಸೆಟ್ನಲ್ಲಿ ಡಕ್ವರ್ತ್, 10ನೇ ಗೇಮ್ಲ್ಲಿ 3ನೇ ಬಾರಿಗೆ ಬೊಂಜಿಯ ಸರ್ವ್ಅನ್ನು ಬ್ರೇಕ್ ಮಾಡುವ ಮೂಲಕ ಮುನ್ನಡೆ ಕಂಡುಕೊಂಡರು. ಬೆಂಜಮಿನ್ ಬೊಂಜಿ ಎರಡು ಬಾರಿ ಡಕ್ವರ್ತ್ರ ಸರ್ವ್ ಬ್ರೇಕ್ ಮಾಡಿದರೂ, ಪ್ರಮುಖ ಸಮಯದಲ್ಲಿ ಹಿನ್ನಡೆ ಕಂಡರು. ಕಾಲಿನ ಗಾಯದಿಂದಾಗಿ 2017, 2018ರ ವರ್ಷದಲ್ಲಿ ಬಹುತೇಕ ಸಮಯವನ್ನು ವಿಶ್ರಾಂತಿಯಲ್ಲಿಯೇ ಕಳೆದಿದ್ದ ಡಕ್ವರ್ತ್ 2ನೇ ಸೆಟ್ನ 5ನೇ ಗೇಮ್ಲ್ಲಿ ಬೊಂಜಿ ಸರ್ವ್ಅನ್ನು ಬ್ರೇಕ್ ಮಾಡಿ 3-2ರ ಮುನ್ನಡೆಗೇರಿದ್ದರು. ನಂತರದ ಗೇಮ್ಲ್ಲಿ ಸರ್ವ್ ಬ್ರೇಕ್ ಮಾಡುವ ಮೂಲಕ ಬೊಂಜಿಸಮಬಲ ಸಾಧಿಸಲು ಯಶ ಕಂಡರೆ, 7ನೇ ಗೇಮ್ ಕೊನೆಯ ಅಂಕದಲ್ಲಿ ಡಬಲ್ಫಾಲ್ಟ್ ಎಸಗಿ ಸರ್ವ್ ಬ್ರೇಕ್ಗೆ ಒಳಗಾದರು. ಆರಂಭದಿಂದಲೂ ಆಕ್ರಮಣಕಾರಿ ಆಟವಾಡುತ್ತಿದ್ದ ಡಕ್ವರ್ತ್ ಗೆಲುವಿನ ಸನಿಹದಲ್ಲಿದ್ದ ವೇಳೆ ರಕ್ಷಣಾತ್ಮಕ ಆಟದ ಮೊರೆಹೋಗುವ ಮೂಲಕ ಚಾಂಪಿಯನ್ ಎನಿಸಿಕೊಂಡರು.
ಸಂತೋಷ್ ನಾಯ್ಕ್