ಕ್ರೀಡೆ

ಟೆಸ್ಟ್​ ಕ್ರಿಕೆಟ್​ನಲ್ಲಿ 400 ರನ್ ಸಿಡಿಸಿದ ತನ್ನ ದಾಖಲೆ ಮುರಿಯಬಲ್ಲ ಭಾರತೀಯ ಆಟಗಾರನನ್ನು ಹೆಸರಿಸಿದ ಬ್ರಿಯಾನ್​ ಲಾರಾ!

ನವದೆಹಲಿ: ಟೆಸ್ಟ್​ ಕ್ರಿಕೆಟ್​ನಲ್ಲಿ 400 ರನ್​ ಸಿಡಿಸಿರುವುದನ್ನೂ ಸೇರಿದಂತೆ ತನ್ನ ಎಲ್ಲ ದಾಖಲೆಗಳನ್ನು ಮುರಿಯುವ ಸಾಮರ್ಥ್ಯ ಭಾರತದ ಯುವ ಎಡಗೈ ಬ್ಯಾಟರ್​ ಯಶಸ್ವಿ ಜೈಸ್ವಾಲ್​ಗೆ ಇದೆ ಎಂದು ವೆಸ್ಟ್​ ಇಂಡೀಸ್​ ಬ್ಯಾಟಿಂಗ್​ ದಿಗ್ಗಜ ಬ್ರಿಯಾನ್​ ಲಾರಾ ಅಭಿಪ್ರಾಯಪಟ್ಟಿದ್ದಾರೆ.

22 ವರ್ಷದ ಜೈಸ್ವಾಲ್​ ಇದುವರೆಗೆ 9 ಟೆಸ್ಟ್​ ಪಂದ್ಯಗಳನ್ನಷ್ಟೇ ಆಡಿದ್ದಾರೆ. ಆದರೆ ಈಗಲೇ ಅವರ ಆಟದಿಂದ ಪ್ರಭಾವಿತಗೊಂಡಿರುವ ಮಾಜಿ ಎಡಗೈ ಬ್ಯಾಟರ್​ ಲಾರಾ, "ಜೈಸ್ವಾಲ್​ಗೆ ದೊಡ್ಡ ಇನಿಂಗ್ಸ್​ಗಳನ್ನು ಆಡಬಲ್ಲರು. ಈಗಾಗಲೆ ಕೆಲ ದ್ವಿಶತಕ ಬಾರಿಸಿದ್ದಾರೆ' ಎಂದು ಹೇಳಿದ್ದಾರೆ. ಭಾರತದ ಮತ್ತೋರ್ವ ಎಡಗೈ ಬ್ಯಾಟರ್​ ಅಭಿಷೇಕ್​ ಶರ್ಮ ಆಟವನ್ನೂ 55 ವರ್ಷದ ಲಾರಾ ಹೊಗಳಿದ್ದಾರೆ.