ಅಹಮದಾಬಾದ್: ಟೂರ್ನಿಯ ಆರಂಭದಿಂದಲೂ ಒಮ್ಮೆಯೂ ಪ್ರಶಸ್ತಿ ಜಯಿಸದ ಪಂಜಾಬ್ ಕಿಂಗ್ಸ್ ಹಾಗೂ ಪದಾರ್ಪಣೆಯ ಆವೃತ್ತಿಯಲ್ಲಿ ಚಾಂಪಿಯನ್ ಎನಿಸಿಕೊಂಡಿರುವ ಗುಜರಾತ್ ಟೈಟಾನ್ಸ್ ತಂಡಗಳು ಐಪಿಎಲ್ 18ನೇ ಆವೃತ್ತಿಯಲ್ಲಿ ಮಂಗಳವಾರ ಮುಖಾಮುಖಿಯಾಗಲಿವೆ. ಹಾಲಿ ಚಾಂಪಿಯನ್ ಕೆಕೆಆರ್ ತಂಡದ ಯಶಸ್ಸಿನ ನಡುವೆಯೂ ರಿಟೇನ್ ಆಗದ ಶ್ರೇಯಸ್ ಅಯ್ಯರ್, ಪಂಜಾಬ್ ್ರಾಂಚೈಸಿಯ 18 ವರ್ಷಗಳ ಪ್ರಶಸ್ತಿ ಬರ ನೀಗಿಸುವ ನಿರೀಕ್ಷೆಯಲ್ಲಿದ್ದಾರೆ.
2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ೈನಲ್‌ನಲ್ಲಿ ಮುನ್ನಡೆಸಿದ ಜತೆಗೆ ಕಳೆದ ಆವೃತ್ತಿಯಲ್ಲಿ ಕೆಕೆಆರ್ ತಂಡದ ನಾಯಕನಾಗಿ ಯಶಸ್ಸು ಗಳಿಸಿದ ಶ್ರೇಯಸ್ ಅಯ್ಯರ್ ಈ ಬಾರಿ ಪಂಜಾಬ್‌ನ ಸಾರಥ್ಯ ವಹಿಸಿಕೊಂಡಿದ್ದಾರೆ. ಇತ್ತ ಭಾರತ ಏಕದಿನ ತಂಡದ ಉಪನಾಯಕ ಶುಭಮಾನ್ ಗಿಲ್ ಹಿಂದಿನ ಆವೃತ್ತಿಯ ನೀರಸ ನಿರ್ವಹಣೆಯಿಂದ ಪುಟಿದೇಳುವ ಹಂಬಲದಲ್ಲಿದ್ದಾರೆ. ಕಳೆದ ತಿಂಗಳು ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಸದಸ್ಯರಾಗಿದ್ದ ಗಿಲ್-ಶ್ರೇಯಸ್ ಹಾಲಿ ವರ್ಷ ಉತ್ತಮ ಾರ್ಮ್‌ನಲ್ಲಿದ್ದು, ನಾಯಕರಾಗಿ ಇವರಿಬ್ಬರ ಮುಖಾಮುಖಿ ಕುತೂಹಲ ಮೂಡಿಸಿದೆ.
ಇತ್ತೀಚಿನ ದಿನಗಳಲ್ಲಿ ರನ್‌ಬರ್ ಎದುರಿಸುತ್ತಿರುವ ಇಂಗ್ಲೆಂಡ್‌ನ ಜೋಸ್ ಬಟ್ಲರ್-ಶುಭಮಾನ್ ಗುಜರಾತ್ ಇನಿಂಗ್ಸ್ ಆರಂಭಿಸಲಿದ್ದಾರೆ. ರಿಟೇನ್ ಆಗಿರುವ ಸಾಯಿ ಸುದರ್ಶನ್, ಶಾರುಖ್ ಖಾನ್ ಜತೆಗೆ ವಿಂಡೀಸ್‌ನ ರ್ಶೆಾನ್ ರುದರ್‌ಪೋರ್ಡ್, ಗ್ಲೆನ್ ಫಿಲಿಪ್ಸ್, ರಾಹುಲ್ ತೆವಾಟಿಯಾ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಸೀಮಿತ ಓವರ್‌ಗಳ ಭಾರತ ತಂಡದಿಂದ ಹೊರಬಿದ್ದಿರುವ ಮೊಹಮದ್ ಸಿರಾಜ್ ರಾಷ್ಟ್ರೀಯ ತಂಡಕ್ಕೆ ಮರಳಲು ಈ ಸೀಸನ್ ನಿರ್ಣಾಯಕ ಎನಿಸಬಹುದು. ಕನ್ನಡಿಗ ಪ್ರಸಿದ್ಧ ಕೃಷ್ಣ, ಕಗಿಸೊ ರಬಾಡ, ಗೆರಾಲ್ಡ್ ಕೋಟ್‌ಜೀ ಜತೆಗೆ ರಶೀದ್ ಖಾನ್ ಗುಜರಾತ್ ಬೌಲಿಂಗ್ ವಿಭಾಗದ ಶಕ್ತಿ ಎನಿಸಿದ್ದಾರೆ.
ಶ್ರೇಯಸ್-ಪಾಂಟಿಂಗ್ ಹೊಸ ಆರಂಭ!
2018ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಚೊಚ್ಚಲ ಬಾರಿ ೈನಲ್‌ಗೇರಿಸಿದ್ದ ಶ್ರೇಯಸ್ ಹಾಗೂ ಕೋಚ್ ರಿಕಿ ಪಾಂಟಿಂಗ್ ಜೋಡಿ ಮತ್ತೆ ಒಂದಾಗಿದೆ. ಹಿಂದಿನ 5 ಆವೃತ್ತಿಯ ಅಂಕಪಟ್ಟಿ ಅಗ್ರ 5ರಲ್ಲೂ ಕಾಣಿಸದ ಪಂಜಾಬ್‌ಗೆ ಈ ಜೋಡಿ ಈ ಬಾರಿ ಹೊಸ ಆರಂಭ ಒದಗಿಸುವ ನಿರೀಕ್ಷೆ ಹರಡಿದೆ. 2018ರಲ್ಲಿ ಕೊನೆಯದಾಗಿ ಪ್ಲೇಆ್ಗೇರಿದ್ದ ಪಂಜಾಬ್, 2014ರಲ್ಲಿ ಒಮ್ಮೆ ರನ್ನರ್ ಅಪ್‌ಗೆ ಸಮಾಧಾನ ಕಂಡಿತ್ತು.
ಹಿಂದಿನ ಆವೃತ್ತಿಯಿಂದ ಸಂಪೂರ್ಣ ಬದಲಾವಣೆ ಕಂಡಿರುವ ಪಂಜಾಬ್ ತಂಡ ಶ್ರೇಯಸ್ ಅಯ್ಯರ್ ಮೇಲೆ ನಂಬಿಕೆ ಇರಿಸಿದೆ. ಐದು ವರ್ಷಗಳ ನಂತರ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತೆ ತಂಡಕ್ಕೆ ಮರಳಿದ್ದು, ಆಲ್ರೌಂಡರ್ ಮಾರ್ಕಸ್ ಸ್ಟೋಯಿನಿಸ್, ಅಜ್ಮತ್‌ಉಲ್ಲಾ ಒಮರ್ಜಾಯಿ, ಮಾರ್ಕೋ ಜಾನ್ಸೆನ್ ಅವರಂಥ ಆಲ್ರೌಂಡರ್‌ಗಳ ಬಲವಿದೆ. ಕಳೆದ ಸೀಸನ್‌ನ ಹೀರೋ ಶಂಶಾಕ್ ಸಿಂಗ್, 2 ಐಸಿಸಿ ಟೂರ್ನಿ ವಿಜೇತ ವೇಗಿ ಅರ್ಷದೀಪ್ ಸಿಂಗ್, ಯಜುವೇಂದ್ರ ಚಾಹಲ್ ತಂಡದಲ್ಲಿದ್ದಾರೆ.
ಮುಖಾಮುಖಿ: 5
ಗುಜರಾತ್: 3
ಪಂಜಾಬ್: 2
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್.