ಲಾಹೋರ್: ಮುಂಬರುವ ACC ಪುರುಷರ ಟಿ20 ಉದಯೋನ್ಮುಖ ತಂಡಗಳ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿ ಸೆಣಸಾಡಲಿವೆ. ಇದೇ ಅಕ್ಟೋಬರ್ 19ರಂದು ಟೀಮ್ ಇಂಡಿಯಾ ಎದುರು ಕಣಕ್ಕಿಳಿಯಲಿರುವ ಪಾಕಿಸ್ತಾನ ಎ ತಂಡ, ಭಾರತದ ವಿರುದ್ದ ಗೆದ್ದು ಬೀಗಲು ಬೇಕಿರುವ ಸಕಲ ತಯಾರಿಗಳನ್ನು ಭರ್ಜರಿಯಾಗಿ ನಡೆಸುತ್ತಿದೆ. ಇನ್ನು ಈ ಮಧ್ಯೆ ಮಾಧ್ಯಮಗಳ ಜತೆ ಹಲವು ವಿಷಯಗಳನ್ನು ಹಂಚಿಕೊಂಡ ಪಾಕ್ 'ಎ' ಟೀಮ್ನ ಕ್ಯಾಪ್ಟನ್ ಮೊಹಮ್ಮದ್ ಹ್ಯಾರಿಸ್, ನಮ್ಮ ಡ್ರೆಸ್ಸಿಂಗ್ ರೂಮ್‌ನಲ್ಲಿ ಭಾರತದ ಬಗ್ಗೆ ಮಾತನಾಡುವುದು ಅಥವಾ ಚರ್ಚಿಸುವುದನ್ನು ನಿಷೇಧಿಸಲಾಗಿದೆ (Ban) ಎಂದಿದ್ದಾರೆ.
ಇದನ್ನೂ ಓದಿ: ತಲೆಹೊಟ್ಟು, ಕೂದಲು ಉದುರುವ ಸಮಸ್ಯೆ ಇದ್ಯಾ? ಬೇವಿನ ಎಲೆ ಬಳಸಿ ಸುಲಭವಾಗಿ ತಲೆಹೊಟ್ಟು ನಿವಾರಿಸಿ…Neem Leaves
"ನಮ್ಮ ಡ್ರೆಸ್ಸಿಂಗ್ ರೂಮ್‌ನಲ್ಲಿ ಭಾರತದ ಬಗ್ಗೆ ಮಾತನಾಡುವುದು ಅಥವಾ ಚರ್ಚಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಟೀಮ್ ಇಂಡಿಯಾ ಬಗ್ಗೆ ಮಾತನಾಡಲು ನಮಗೆ ಅವಕಾಶ ನೀಡದಿರುವುದು ಇದೇ ಮೊದಲು. ಈ ನಿಯಮ ಭಾರೀ ಶಿಸ್ತಿನದ್ದಾಗಿದೆ. ನಾವು ಇತರ ತಂಡಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ನಾನು ಹಿರಿಯ ಪಾಕಿಸ್ತಾನ ತಂಡದಲ್ಲಿಯೂ ಆಡಿದ್ದೇನೆ ಮತ್ತು ಭಾರತ ವಿರುದ್ಧದ ಪಂದ್ಯ ನಡೆದಾಗ ಅಲ್ಲಿ ಏನಾಗುತ್ತದೆ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಪಂದ್ಯದ ಒತ್ತಡದ ಮಟ್ಟವು ನಿಮ್ಮನ್ನು ವಿಚಲಿತಗೊಳಿಸಬಹುದು. ಈ ಎಲ್ಲಾ ಕಾರಣಗಳಿಂದ ಇದೀಗ ನಿಷೇಧ ಹೇರಲಾಗಿದೆ" ಎಂದು ಕ್ಯಾಪ್ಟನ್ ಹ್ಯಾರಿಸ್ ಹೇಳಿದ್ದಾರೆ. ಮೊಹಮ್ಮದ್ ಬಿಚ್ಚಿಟ್ಟ ಈ ಸ್ಫೋಟಕ ಸಂಗತಿ ಸದ್ಯ ಕ್ರೀಡಾಭಿಮಾನಿಗಳಲ್ಲಿ ಭಾರೀ ಅಚ್ಚರಿ ಮೂಡಿಸಿದೆ.
ಇನ್ನು ಭಾರತ 'ಎ' ತಂಡದ ಕ್ಯಾಪ್ಟನ್ ಆಗಿ ತಿಲಕ್ ವರ್ಮಾ ಟೀಮ್ನ ಮುನ್ನಡೆಸಲಿದ್ದು, ಪುರುಷರ ಟಿ20 ಎಮರ್ಜಿಂಗ್ ಟೀಮ್ಸ್ ಏಷ್ಯಾಕಪ್ ಟೂರ್ನಿಯಲ್ಲಿ ಭಾರತಕ್ಕೆ ಅಭಿಷೇಕ್ ಶರ್ಮಾ ಉಪನಾಯಕರಾಗಿದ್ದಾರೆ. ಟೀಮ್ ಇಂಡಿಯಾ ಎ ಟೀಮ್ನಲ್ಲಿ ಪ್ರಭಾಸಿಮ್ರಾನ್ ಸಿಂಗ್, ಆಯುಷ್ ಬಡೋನಿ, ರಮಣದೀಪ್ ಸಿಂಗ್, ಆರ್. ಸಾಯಿ ಕಿಶೋರ್, ಹೃತಿಕ್ ಶೋಕೀನ್ ಸೇರಿದಂತೆ ಐಪಿಎಲ್ನ ವಿವಿಧ ಫ್ರಾಂಚೈಸಿಗಳ ಹಲವು ಸ್ಟಾರ್ ಯುವ ಆಟಗಾರರು ತಂಡದ ಭಾಗವಾಗಿದ್ದು, ಭಾರತವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ,(ಏಜೆನ್ಸೀಸ್).