Irfan Pathan: ಭಾರತ ಮತ್ತು ಇಂಗ್ಲೆಂಡ್ ನಡುವೆ ಮ್ಯಾಂಚೆಸ್ಟರ್ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಡ್ರಾ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಕೆ.ಎಲ್ ರಾಹುಲ್ ಅವರನ್ನು ಭಾರತದ ಮಾಜಿ ಅಲ್ರೌಂಡರ್ ಇರ್ಫಾನ್ ಪಠಾಣ್ ಶ್ಲಾಘಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನಲ್ನಲ್ಲಿ ಮಾತನಾಡಿದ ಪಠಾಣ್, ರಾಹುಲ್ ಮೊದಲ ಇನಿಂಗ್ಸ್ನಲ್ಲಿ 98 ಎಸೆತಗಳು ಮತ್ತು ಎರೆಡನೇ ಇನಿಂಗ್ಸ್ 230 ಬಾಲ್ಗಳನ್ನು ಎದುರಿಸಿದರು. ಎರೆಡು ಇನಿಂಗ್ಸ್ ಸೇರಿ ಸುಮಾರು 328 ಆಡಿದರು. ಪಂದ್ಯ ಡ್ರಾ ಮಾಡುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ಅದರೆ, ರಾಹುಲ್ ಶತಕದಿಂದ ವಂಚಿತರಾಗಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ, ಕಳೆದ ಹಲವು ವರ್ಷಗಳಿಂದ ಕೆ.ಎಲ್. ರಾಹುಲ್ ಭಾರತೀಯ ಟೆಸ್ಟ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಭಾರತ ತಂಡದ ಹಿರಿಯ ಆಟಗಾರ, ಜವಾಬ್ದಾರಿಯೊಂದಿಗೆ ಆಡುತ್ತಾರೆ. ನಾನು ಮೊದಲೇ ಹೇಳಿದ್ದೇನೆ, ಬಾಲ್ ಬಿಡುವುದು ಒಂದು ಕಲೆಯಾಗಿದ್ದರೆ, ರಾಹುಲ್ ಕಲಾವಿದ ಎಂದು ಪಠಾಣ್ ತಿಳಿಸಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ 500ಕ್ಕೂ ಹೆಚ್ಚು ರನ್ಗಳಿಸಿದ ಏಷ್ಯಾದ ಆರಂಭಿಕ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್ ಪಾತ್ರರಾಗಿದ್ದಾರೆ. ಭಾರತೀಯ ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್ 1979ರಲ್ಲಿ ಈ ಸಾಧನೆ ಮಾಡಿದ್ದರು.