ಕ್ರೀಡೆ

ಕೆಕೆಆರ್ ಮಣಿಸಿ ಗೆಲುವಿನ ಖಾತೆ ತೆರೆದ ಆರ್‌ಸಿಬಿ

ಮುಂಬೈ: ಅಂತಿಮ ಹಂತದವರೆಗೂ ಜಿದ್ದಾಜಿದ್ದಿಗೆ ಸಾಕ್ಷಿಯಾದ ಹಣಾಹಣಿಯಲ್ಲಿ ಮೇಲುಗೈ ಸಾಧಿಸಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ತನ್ನ 2ನೇ ಪಂದ್ಯದಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡವನ್ನು 3 ವಿಕೆಟ್‌ಗಳಿಂದ ಮಣಿಸಿತು. ಕೆಕೆಆರ್ ನೀಡಿದ ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಆರ್‌ಸಿಬಿ ಕಡೇ ಓವರ್‌ವರೆಗೂ ತಿಣುಕಾಡಿದರೂ ಟೂರ್ನಿಯಲ್ಲಿ ಮೊದಲ ಗೆಲುವಿನ ಸಂಭ್ರಮ ಕಂಡಿತು.

ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ (20ಕ್ಕೆ 4), ವೇಗಿಗಳಾದ ಆಕಾಶ್ ದೀಪ್ (45ಕ್ಕೆ 3) ಮತ್ತು ಹರ್ಷಲ್ ಪಟೇಲ್ (11ಕ್ಕೆ 2) ಮಾರಕ ದಾಳಿಗೆ ನಲುಗಿದ ಕೆಕೆಆರ್, 18.5 ಓವರ್‌ಗಳಲ್ಲಿ 128 ರನ್‌ಗಳಿಗೆ ಸರ್ವಪತನ ಕಂಡಿತು. ಪ್ರತಿಯಾಗಿ ಆರ್‌ಸಿಬಿ, 19.2 ಓವರ್‌ಗಳಲ್ಲಿ 7 ವಿಕೆಟ್‌ಗೆ 132 ರನ್‌ಗಳಿಸಿ ಜಯದ ನಗೆ ಬೀರಿತು.

ಕೆಕೆಆರ್: 18.5 ಓವರ್‌ಗಳಲ್ಲಿ 128 (ವೆಂಕಟೇಶ್ ಅಯ್ಯರ್ 10, ಶ್ರೇಯಸ್ ಅಯ್ಯರ್ 13, ನಿತೀಶ್ ರಾಣಾ 10, ಸುನೀಲ್ ನಾರಾಯಣ್ 12, ಸ್ಯಾಮ್ ಬಿಲ್ಲಿಂಗ್ಸ್ 14, ರಸೆಲ್ 25, ಉಮೇಶ್ ಯಾದವ್ 18, ವನಿಂದು ಹಸರಂಗ 20ಕ್ಕೆ 4, ಆಕಾಶ್ ದೀಪ್ 45ಕ್ಕೆ 3, ಹರ್ಷಲ್ ಪಟೇಲ್ 11ಕ್ಕೆ 2, ಮೊಹಮದ್ ಸಿರಾಜ್ 25ಕ್ಕೆ 1). ಆರ್‌ಸಿಬಿ: 19.2 ಓವರ್‌ಗಳಲ್ಲಿ 7 ವಿಕೆಟ್‌ಗೆ 132 ( ಶೆರ್ಫಾನೆ ರುದರ್ ಫೋರ್ಡ್​ 28, ಶಾಬಾಜ್ ಅಹಮದ್ 27, ಡೇವಿಡ್ ವಿಲ್ಲಿ 18, ಟಿಮ್ ಸೌಥಿ 20ಕ್ಕೆ 3, ಉಮೇಶ್ ಯಾದವ್ 16ಕ್ಕೆ 2, ಸುನೀಲ್ ನಾರಾಯಣ್ 12ಕ್ಕೆ 1).