ಟಿ20 ಕ್ರಿಕೆಟ್ನಲ್ಲಿ ದ್ವಿಶತಕ; ವೈಭವ್ ಸೂರ್ಯವಂಶಿ ಟಾರ್ಗೆಟ್!
ನವದೆಹಲಿ: ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಆರ್ಭಟಿಸುತ್ತಿರುವ ಭಾರತೀಯ ಕ್ರಿಕೆಟ್ನ 15 ವರ್ಷದ ಬ್ಯಾಟಿಂಗ್ ಸೆನ್ಸೇಶನ್ ವೈಭವ್ ಸೂರ್ಯವಂಶಿ (Vaibhav Sooryavanshi), ಟಿ20 ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ಮೊಟ್ಟಮೊದಲ ಬ್ಯಾಟರ್ ಎನಿಸುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ.
ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀರ್ಟಸೆನ್ ಅವರ ಯುಟ್ಯೂಬ್ ಚಾನಲ್ನಲ್ಲಿ ತನ್ನ ಕನಸಿನ ಬಗ್ಗೆ ಮುಕ್ತವಾಗಿ ಮಾತನಾಡಿರುವ ಸೂರ್ಯವಂಶಿ, ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಅವರ 175 ರನ್ ದಾಖಲೆ ಮುರಿಯುವ ಹಂಬಲ ವ್ಯಕ್ತಪಡಿಸಿದ್ದಾರೆ. ಕ್ರಿಸ್ ಗೇಲ್ 2013ರ ಐಪಿಎಲ್ನಲ್ಲಿ ಆರ್ಸಿಬಿ ಪರ ಈ ದಾಖಲೆ ಬರೆದಿದ್ದರು. ಗೇಲ್ ದಾಖಲೆ ಮುರಿಯುವ ಜತೆಗೆ ಟಿ20ಯಲ್ಲಿ ದ್ವಿಶತಕ ಬಾರಿಸುವ ಬಯಕೆಯೂ ಇದೆ. ಯಾವುದೇ ಪಂದ್ಯದಲ್ಲಿ ನಾನು 20 ಓವರ್ವರೆಗೆ ಆಡಿದರೆ ಖಂಡಿತವಾಗಿಯೂ ಇದನ್ನು ಸಾಧಿಸಬಹುದು ಎಂದು ಸೂರ್ಯವಂಶಿ ಹೇಳಿದ್ದಾರೆ.
ಸೂರ್ಯವಂಶಿ 144 ರನ್ ಗಳಿಸಿರುವುದು ಟಿ20ಯಲ್ಲಿ ಇದುವರೆಗೆ ಅವರ ಗರಿಷ್ಠ ಸ್ಕೋರ್ ಆಗಿದೆ. ಕಳೆದ 19 ವಯೋಮಿತಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ 175 ರನ್ ಸಿಡಿಸಿದ್ದ ಸೂರ್ಯವಂಶಿ, ಮುಂದಿನ ಬಾರಿ ಕಿರಿಯರ ಏಕದಿನ ಪಂದ್ಯ ಆಡಿದಾಗ 200 ರನ್ ಸಿಡಿಸಲು ಪ್ರಯತ್ನಿಸುವೆ. ನಾನು ಹೆಚ್ಚು ರನ್ ಗಳಿಸಿದಷ್ಟು ತಂಡಕ್ಕೆ ಲಾಭವಾಗುತ್ತದೆ ಎಂದು ಹೇಳಿದ್ದಾರೆ.