ಕ್ರೈಸ್ಟ್ಚರ್ಚ್: ಚುಟುಕು ಕ್ರಿಕೆಟ್ನಲ್ಲಿ ತನ್ನ ಸರ್ವಾಧಿಕ ಮೊತ್ತದ ಯಶಸ್ವಿ ಚೇಸಿಂಗ್ನೊಂದಿಗೆ ಕಿವೀಸ್ ಪ್ರವಾಸದಲ್ಲಿ ಶುಭಾರಂಭ ಕಂಡಿರುವ ಭಾರತ ತಂಡ ಗೆಲುವಿನ ಲಯ ಕಾಯ್ದುಕೊಳ್ಳುವ ತವಕದಲ್ಲಿದೆ. ಶ್ರೇಯಸ್ ಅಯ್ಯರ್ ಪಡೆ ಶನಿವಾರ ಆತಿಥೇಯ ನ್ಯೂಜಿಲೆಂಡ್ ಎದುರು ಎರಡನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಸರಣಿಯಲ್ಲಿ ಮುನ್ನಡೆ ವಿಸ್ತರಿಸಿಕೊಳ್ಳುವ ಹಂಬಲದಲ್ಲಿದೆ.
ಐದು ಪಂದ್ಯಗಳ ಸರಣಿಯಲ್ಲಿ ಭಾರತ 1-0 ರಿಂದ ಮೇಲುಗೈ ಸಾಧಿಸಿದರೂ, ಬೌಲಿಂಗ್ ವಿಭಾಗದಲ್ಲಿ ಸುಧಾರಣೆ ಕಾಣಬೇಕಿದೆ. ಆರಂಭಿಕ ಪಂದ್ಯದಲ್ಲಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಸಹಿತ ಎಲ್ಲ ಬೌಲರ್ಗಳು ಪ್ರತಿ ಓವರ್ 10ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಆಲ್ರೌಂಡರ್ಗಳು ಬೌಲಿಂಗ್ನಲ್ಲಿ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿಲ್ಲ ಎಂಬುದು ಚಿಂತೆಯ ವಿಷಯವಾಗಿದ್ದು, ನಿತೀಶ್ ಕುಮಾರ್ ರೆಡ್ಡಿ 4 ಓವರ್ ಕೋಟಾದಲ್ಲಿ ಯಾವುದೇ ವಿಕೆಟ್ ಪಡೆಯದೆ 40 ರನ್ ನೀಡಿದ್ದರು. 4 ವರ್ಷದ ನಂತರ ರಾಷ್ಟ್ರೀಯ ತಂಡಕ್ಕೆ ಮರಳಿರುವ ಭುವನೇಶ್ವರ್ ಲಯಕ್ಕೆ ಮರಳಬೇಕಿದ್ದು, ಪವರ್ ಪ್ಲೇಯಲ್ಲಿ ಕಿವೀಸ್ ರನ್ಗಳಿಕೆಗೆ ನಿಯಂತ್ರಣ ಹೇರಬೇಕು. ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮ, ಶ್ರೇಯಸ್ ಅಯ್ಯರ್ ಉತ್ತಮ ಲಯದಲ್ಲಿದ್ದು, 8ನೇ ಕ್ರಮಾಂಕದವರೆಗೈ ಬ್ಯಾಟಿಂಗ್ ಕ್ರಮಾಂಕ ಹೊಂದಿರುವುದು ಭಾರತ ತಂಡಕ್ಕೆ ದೊಡ್ಡ ಬಲ ಎನಿಸಿದೆ. ಇಬ್ಬನಿಯ ಸಮಸ್ಯೆಯಿಂದಾಗಿ ಮೊದಲ ಪಂದ್ಯದಲ್ಲಿ ಗೆಲುವಿನ ಸನಿಹ ಎಡವಿರುವ ಮಿಚೆಲ್ ಸ್ಯಾಂಟ್ನರ್ ಪಡೆ ಪುಟಿದೇಳುವ ಮೂಲಕ ಸರಣಿಯಲ್ಲಿ ಸಮಬಲ ಸಾಧಿಸುವ ಛಲದಲ್ಲಿದೆ.
ಫಿನ್ ಅಲೆನ್, ಟಿಮ್ ಸೀರ್ಟ್ ಜತೆಗೆ ಗ್ಲೆನ್ ಫಿಲಿಪ್ಸ್ ಎದುರು ಭಾರತೀಯ ಬೌಲರ್ಗಳಿಗೆ ಸತ್ವ ಪರೀೆ ಎದುರಾಗಲಿದೆ.
ವೈಭವ್ ಕಣಕ್ಕಿಳಿಯುವ ಸೂಚನೆ
ಬ್ಯಾಟಿಂಗ್ ಸೆನ್ಸೇಶನ್ 15 ವರ್ಷದ ವೈಭವ್ ಸೂರ್ಯವಂಶಿ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವ ನಿರೀೆ ಹರಡಿದೆ. ಇಶಾನ್ ಕಿಶನ್ ಬಲಗೈ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಶನಿವಾರದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. "ಕಿಶನ್ ಫಿಟ್ ಆಗದಿದ್ದರೆ, ವೈಭವ್ ಅವಕಾಶ ಪಡೆಯಲಿದ್ದಾರೆ' ಎಂದಿರುವ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್, ವೈಭವ್ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ. ಮೊದಲ ಪಂದ್ಯದಲ್ಲಿ ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದಿದ್ದ ತಿಲಕ್ ವರ್ಮ 5ನೇ ಕ್ರಮಾಂಕಕ್ಕೆ ಮರಳುವ ನಿರೀೆ ಇದೆ.
ಟೀಮ್ ನ್ಯೂಸ್
ಭಾರತ: ಬಲಗೈ ನೋವಿನ ಸಮಸ್ಯೆಯಿಂದಾಗಿ ಇಶಾನ್ ಕಿಶನ್ 2ನೇ ಪಂದ್ಯಕ್ಕೆ ಅಲಭ್ಯರಾಗಿದ್ದು, 11ರ ಬಳಗದಲ್ಲಿ ಬದಲಾವಣೆ ಖಚಿತವೆನಿಸಿದೆ. ಇಶಾನ್ ಸ್ಥಾನಕ್ಕೆ ವೈಭವ್ ಸೂರ್ಯವಂಶಿ ಮತ್ತು ಶಿವಂ ದುಬೆ ನಡುವೆ ಸ್ಪರ್ಧೆ ಇದೆ. ವೈಭವ್ ಅವಕಾಶ ಪಡೆದರೆ, ಅಭಿಷೇಕ್ ಜತೆಯಾಗಿ ಇನಿಂಗ್ಸ್ ಆರಂಭಿಸಲಿದ್ದಾರೆ. ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಆಡುವ ನಿರೀೆ ಇದೆ. ಉಳಿದಂತೆ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ ಎನಿಸಿದೆ.
ನ್ಯೂಜಿಲೆಂಡ್: ಕೊನೇ ಓವರ್ವರೆಗೂ ಗೆಲುವಿಗೆ ಹೋರಾಟ ನಡೆಸಿದ ಆಡುವ 11ರ ಬಳಗದಲ್ಲಿ ಪ್ರಯೋಗ ಸಾಧ್ಯತೆ ಇಲ್ಲ. ಸರಣಿಯ ಆರಂಭದಲ್ಲಿ ಬದಲಾವಣೆ ನಡೆಸುವ ನಿರೀೆಯೂ ಕಡಿಮೆ ಎನಿಸಿದೆ.
ಆರಂಭ: ಮಧ್ಯಾಹ್ನ 12.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್, ಸೋನಿ ಲಿವ್
199. ಭಾರತ ತಂಡ ಅಂತಾರಾಷ್ಟ್ರೀಯ ಟಿ20ಯಲ್ಲಿ ಇದುವರೆಗೆ 199 ಗೆಲುವು ದಾಖಲಿಸಿದ್ದು, ಇನ್ನೊಂದು ಜಯ 200 ಪಂದ್ಯ ಗೆದ್ದ ಮೊದಲ ತಂಡ ದಾಖಲೆ ರಚಿಸಲಿದೆ.
ಪಿಚ್ ರಿಪೋರ್ಟ್
ಶನಿವಾರ ಸಹಿತ ಸರಣಿಯ ಎಲ್ಲ ಪಂದ್ಯಗಳ ಸ್ಥಳಿಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಇಬ್ಬನಿ ಸಮಸ್ಯೆ ಪ್ರಮುಖ ಪಾತ್ರವಹಿಸಲಿದೆ. ಗುರುವಾರ ನಡೆದ ಪಿಚ್ನಲ್ಲಿಯೇ ಎರಡನೇ ಪಂದ್ಯ ನಡೆಯಲಿದ್ದು, ಬ್ಯಾಟಿಂಗ್ ಸ್ನೇಹಿ ಆಗಿರಲಿದೆ. ಟಾಸ್ ಗೆದ್ದ ತಂಡ ಚೇಸಿಂಗ್ ಆಯ್ಕೆ ಮಾಡಿಳ್ಳುವ ಸಾಧ್ಯತೆ ಹೆಚ್ಚಿದೆ. ಪಂದ್ಯಕ್ಕೆ ಮಳೆ ಭೀತಿಯಿಲ್ಲ.