ಬೆಂಗಳೂರು: ಅನುಭವಿ ಬ್ಯಾಟರ್ ಮನೀಷ್ ಪಾಂಡೆ ಮತ್ತೆ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಮರಳುವ ನಿರೀಕ್ಷೆ ಹರಡಿದೆ. ನವೆಂಬರ್ 14ರಿಂದ ನಡೆಯಲಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಗುರುವಾರ ಪ್ರಕಟಿಸಿರುವ 26 ಸಂಭಾವ್ಯ ಆಟಗಾರರ ತಂಡದಲ್ಲಿ 37 ವರ್ಷದ ಮನೀಷ್ ಪಾಂಡೆ ಕೂಡ ಸ್ಥಾನ ಪಡೆದಿದ್ದಾರೆ. 2024ರಲ್ಲಿ ಕೊನೆಯದಾಗಿ ರಾಜ್ಯ ತಂಡದ ಪರ ಆಡಿದ್ದ ಅವರು, ಸರಿಸುಮಾರು 2 ವರ್ಷಗಳ ಬಳಿಕ ರಾಜ್ಯ ತಂಡಕ್ಕೆ ಮರಳಿದಂತಾಗಿದೆ.
ರಾಜ್ಯದ ಸಂಭಾವ್ಯರು: ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಮನೀಷ್ ಪಾಂಡೆ, ಆರ್. ಸ್ಮರಣ್, ಅನೀಶ್ ಕೆ.ವಿ., ರೋಹನ್ ಪಾಟೀಲ್, ಮ್ಯಾಕ್ಲೀನ್ ನೋರೋನ್ಹಾ, ಅಭಿನವ್ ಮನೋಹರ್, ಅನೀಶ್ವರ್ ಗೌತಮ್, ನಿಕಿನ್ ಜೋಸ್, ಶ್ರೇಯಸ್ ಗೋಪಾಲ್, ಶಿಖರ್ ಶೆಟ್ಟಿ, ಶ್ರೀಶ ಎಸ್. ಆಚಾರ್, ಪ್ರವಿಣ್ ದುಬೆ, ರಿತೇಶ್ ಭಟ್ಕಳ್, ಮಾಧವ್ ಬಜಾಜ್, ಶುಭಾಂಗ್ ಹೆಗ್ಡೆ, ವೈಶಾಖ್ ವಿ, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ಎಲ್.ಆರ್. ಕುಮಾರ್, ಅರಬಿಂದ್ ಕುಮಾರ್ ಎಲ್, ಕೆಎಲ್ ಶ್ರೀಜಿತ್, ಲವನೀತ್ ಸಿಸೋಡಿಯಾ, ಬಿಆರ್ ಶರತ್.