ಆರ್ಸಿಬಿ ವಿರುದ್ಧ ಪಂದ್ಯಕ್ಕೆ ಸೂರ್ಯಕುಮಾರ್ ಗೈರು; ಗುಡ್ನ್ಯೂಸ್ ನಿರೀಕ್ಷೆ!
ಮುಂಬೈ: ಮೇ 10ರಂದು ರಾಯ್ಪುರದಲ್ಲಿ ಆರ್ಸಿಬಿ (RCB) ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಪರ ಉಪನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಆಡುವುದಿಲ್ಲ. ಸೂರ್ಯಕುಮಾರ್ ಪತ್ನಿ ದೇವಿಶಾ ಶೆಟ್ಟಿ (Devisha Shetty) ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿ ಅವರು ಪಂದ್ಯವನ್ನು ತಪ್ಪಿಸಿಕೊಳ್ಳಲಿದ್ದಾರೆ.
ಸೂರ್ಯಕುಮಾರ್ ಕೌಟುಂಬಿಕ ಕಾರಣಗಳಿಂದ ಪಂದ್ಯಕ್ಕೆ ಗೈರಾಗಲಿದ್ದಾರೆ ಎಂದು ಎಂಐ ತಿಳಿಸಿದೆ. ಇನ್ನು ಬೆನ್ನಿನ ಸ್ನಾಯು ಸೆಳೆತದ ಸಮಸ್ಯೆಯಿಂದ ಲಖನೌ ವಿರುದ್ಧದ ಪಂದ್ಯ ತಪ್ಪಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಬುಧವಾರ ತಂಡದೊಂದಿಗೆ ರಾಯ್ಪುರಕ್ಕೆ ಪ್ರಯಾಣಿಸಿಲ್ಲ. ಆದರೆ ಅವರು ತಡವಾಗಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ಹಾರ್ದಿಕ್ ಫಿಟ್ ಆಗದಿದ್ದರೆ, ವೇಗಿ ಜಸ್ಪ್ರೀತ್ ಬುಮ್ರಾ ನಾಯಕತ್ವ ವಹಿಸಿಕೊಳ್ಳುವ ನಿರೀಕ್ಷೆ ಇದೆ.