SRH vs PBKS 
ಐಪಿಎಲ್

ಪವರ್​ ಪ್ಲೇನಲ್ಲಿ ದಾಖಲೆ ಸ್ಕೋರ್​ ನಿರ್ಮಿಸಿದ ಎಸ್​ಆರ್​ಎಚ್ ಬ್ಯಾಟರ್ಸ್​! ಪಂಜಾಬ್​ ಬೌಲರ್​ಗಳ ಬೆವರಿಳಿಸಿದ ಅಭಿಷೇಕ್​ 50​

ಪ್ರಮುಖ ಮುಖ್ಯಾಂಶಗಳು

  • ಇಂದು (ಏ.11) ಪಂಜಾಬ್ ಕಿಂಗ್ಸ್ ಮತ್ತು ಸನ್​ರೈಸರ್ಸ್ ಹೈದರಾಬಾದ್​ ನಡುವೆ ಪಂದ್ಯ
  • ಟಾಸ್​ ಗೆದ್ದ ಪಂಜಾಬ್ ಮೊದಲು ಬೌಲಿಂಗ್ ಆಯ್ಕೆ
  • ಪವರ್​ ಪ್ಲೇನಲ್ಲಿ ದಾಖಲೆಯ ಸ್ಕೋರ್​ ನಿರ್ಮಿಸಿದ ಎಸ್​ಆರ್​ಎಚ್​ ಬ್ಯಾಟ್ಸ್​ಮನ್​ಗಳು
SRH vs PBKS: ಇಂದು ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 19ನೇ ಆವೃತ್ತಿಯ ಪಂದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿವೆ. ಮೊದಲು ಬ್ಯಾಟಿಂಗ್​ಗಿಳಿದ ಎಸ್​ಆರ್​ಎಚ್​ ಬ್ಯಾಟರ್​ಗಳು, ಇದೀಗ ಮೊದಲ ಆರು ಓವರ್​ಗಳಲ್ಲಿ ದಾಖಲೆಯ ಸ್ಕೋರ್​ ಕಲೆಹಾಕಿದ್ದಾರೆ. 
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪಂಜಾಬ್ ಕಿಂಗ್ಸ್, ಎಸ್​ಆರ್​ಎಚ್​ಗೆ ಬ್ಯಾಟಿಂಗ್ ಮಾಡುವಂತೆ ತಿಳಿಸಿತು. ಅಂತೆಯೇ, ಕಣಕ್ಕಿಳಿದ ಓಪನರ್​ಗಳಾದ ಅಭಿಷೇಕ್ ಶರ್ಮ ಮತ್ತು ಟ್ರಾವಿಸ್​ ಹೆಡ್​, ಆರಂಭದ ಆರು ಓವರ್​​ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪವರ್‌ಪ್ಲೇ ಮುಗಿಯುವುದರೊಳಗೆ ಒಂದೇ ಒಂದು ವಿಕೆಟ್ ಕಳೆದುಕೊಳ್ಳದೆ 105 ರನ್ ಗಳಿಸಿತು. ಅಭಿಷೇಕ್ ಶರ್ಮ ಕೇವಲ 22 ಎಸೆತಗಳಲ್ಲಿ 66 ರನ್ ಗಳಿಸಿದರೆ, ಟ್ರಾವಿಸ್ 15 ಎಸೆತಗಳಲ್ಲಿ 31 ರನ್ ಗಳಿಸುವ ಮೂಲಕ ಈ ದಾಖಲೆಗೆ ಸಾಕ್ಷಿಯಾದರು. 
ಈಗಾಗಲೇ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ಪವರ್ ಪ್ಲೇ ಸ್ಕೋರ್ ಗಳಿಸಿದ ದಾಖಲೆಯನ್ನು ಸನ್​ರೈಸರ್ಸ್​ ತಂಡ ಹೊಂದಿದೆ. 2024ರಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 125/0 ಸ್ಕೋರ್‌ನೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅದೇ ವರ್ಷ, ಲಖನೌ ಸೂಪರ್ ಜೈಂಟ್ಸ್​ ವಿರುದ್ಧ 107/0 ಗಳಿಸಿತ್ತು. ಈಗ, 19ನೇ ಆವೃತ್ತಿಯಲ್ಲಿ ಪಂಜಾಬ್ ವಿರುದ್ಧ 105 ರನ್‌ ಕಲೆಹಾಕುವ ಮುಖೇನ ಮೂರನೇ ಸ್ಥಾನ ಪಡೆದುಕೊಂಡಿದೆ. 

ಐಪಿಎಲ್‌ನಲ್ಲಿ ಅತ್ಯಧಿಕ ಪವರ್ ಪ್ಲೇ ಸ್ಕೋರ್‌ಗಳು

  1. ಸನ್‌ರೈಸರ್ಸ್ ಹೈದರಾಬಾದ್ - 125/0 vs ಡೆಲ್ಲಿ ಕ್ಯಾಪಿಟಲ್ಸ್ (2024)
  2. ಸನ್‌ರೈಸರ್ಸ್ ಹೈದರಾಬಾದ್ - 107/0 vs ಲಖನೌ ಸೂಪರ್‌ಜೈಂಟ್ಸ್ (2024)
  3. ಸನ್‌ರೈಸರ್ಸ್ ಹೈದರಾಬಾದ್ - 105/0 vs ಪಂಜಾಬ್ ಕಿಂಗ್ಸ್ (2026)
  4. ಕೋಲ್ಕತ್ತಾ ನೈಟ್ ರೈಡರ್ಸ್ - 105/0 vs ರಾಯಲ್ ಚಾಲೆಂಜರ್ಸ್ ಬೆಂಗಳೂರು (2017)
  5. ಚೆನ್ನೈ ಸೂಪರ್ ಕಿಂಗ್ಸ್ - 100/2 vs ಪಂಜಾಬ್ ಕಿಂಗ್ಸ್ (2014)