ರೋಹಿತ್ ಶರ್ಮಾ: ಹಾರ್ದಿಕ್ ಪಾಂಡ್ಯರಿಂದ ತೆರವಾದ ನಾಯಕತ್ವದ ಸ್ಥಾನಕ್ಕೆ ರೋಹಿತ್ ಶರ್ಮಾ ಅವರೇ ಅತ್ಯಂತ ನೆಚ್ಚಿನ ಆಯ್ಕೆಯಾಗಿದ್ದಾರೆ.ತಿಲಕ್ ವರ್ಮಾ: 2027ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುವ ಪ್ರಮುಖ ಆಕಾಂಕ್ಷಿಗಳಲ್ಲಿ ಯುವ ಬ್ಯಾಟರ್ ತಿಲಕ್ ವರ್ಮಾ ಕೂಡ ಒಬ್ಬರು. 2022ರಿಂದಲೂ ಮುಂಬೈ ಫ್ರಾಂಚೈಸಿಯೊಂದಿಗೆ ಗುರುತಿಸಿಕೊಂಡಿರುವ ತಿಲಕ್, ಪ್ರಸ್ತುತ ಭಾರತ ಟಿ20 ತಂಡದ ಉಪನಾಯಕರಾಗಿದ್ದಾರೆ. ಜಸ್ಪ್ರೀತ್ ಬುಮ್ರಾ: ವೇಗಿ ಜಸ್ಪ್ರೀತ್ ಬುಮ್ರಾ 2026ರ ಐಪಿಎಲ್ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಪದಾರ್ಪಣೆ ಮಾಡಿದ್ದು, ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.ಸೂರ್ಯಕುಮಾರ್ ಯಾದವ್: 2026ರ ಐಪಿಎಲ್ನಲ್ಲಿ ಸೂರ್ಯಕುಮಾರ್ ಹಲವು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಅಲ್ಲದೆ, 2026ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಹಿರಿಮೆ ಇವರಿಗಿದೆ. ಹೀಗಾಗಿ ಅಂಬಾನಿ ಮಾಲೀಕತ್ವದ ಮುಂಬೈ ತಂಡಕ್ಕೆ ಇವರೊಬ್ಬ ಪ್ರಬಲ ನಾಯಕತ್ವದ ಆಯ್ಕೆಯಾಗಬಲ್ಲರು.
ಮಿಚೆಲ್ ಸ್ಯಾಂಟ್ನರ್: ಸ್ಪಿನ್ ಬೌಲಿಂಗ್ ಆಲ್ರೌಂಡರ್ ಮಿಚೆಲ್ ಸ್ಯಾಂಟ್ನರ್ರನ್ನೂ ಮುಂಬೈ ಇಂಡಿಯನ್ಸ್ ಮುಂದಿನ ನಾಯಕನನ್ನಾಗಿ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ. ಏಕದಿನ ಮತ್ತು ಟಿ20 ಮಾದರಿಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸುತ್ತಿರುವ ಅನುಭವ ಇವರ ಬೆನ್ನಿಗಿದೆ.